ನಾಳೆ ಆಲೆಟ್ಟಿಯಲ್ಲಿ ಮೊಸರು ಕುಡಿಕೆ ಉತ್ಸವ- ಯುವಕರ ಅಟ್ಟಿ ಮಡಿಕೆ ಒಡೆಯುವ ಶೋಭಾಯಾತ್ರೆ

0

ಆಲೆಟ್ಟಿ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ,ಮೊಸರು ಕುಡಿಕೆ ಉತ್ಸವ ಸಮಿತಿ ಆಶ್ರಯದಲ್ಲಿ 2 ನೇ ವರ್ಷದ ಆಲೆಟ್ಟಿ ಮೊಸರು ಕುಡಿಕೆ ಉತ್ಸವವು ನಾಳೆ ಅದ್ದೂರಿಯಾಗಿ ನಡೆಯಲಿದೆ.


ಮಧ್ಯಾಹ್ನ ಶೋಭಾಯಾತ್ರೆಯು ನಾರ್ಕೋಡು ಸದಾಶಿವ ದ್ವಾರದ ಬಳಿಯಿಂದ ಹೊರಟು ಸುಮಾರು 12 ಕಡೆಗಳಲ್ಲಿ ಮಾನವ ಪಿರಮಿಡ್ ರಚಿಸಿ ಯುವಕರ ಅಟ್ಟಿ ಮಡಿಕೆ ಒಡೆಯುವಸಾಹಸಮಯ ಪ್ರದರ್ಶನ ನಡೆಯಲಿರುವುದು.


ಸಂಜೆ ಗಂಟೆ 6.30 ರಿಂದ ಸದಾಶಿವ ದೇವಸ್ಥಾನದ ಸಭಾಭವನದಲ್ಲಿ ಧಾರ್ಮಿಕ ಸಭೆಯು ನಡೆಯಲಿದೆ. ಉದಯ ಕುಡೆಕಲ್ಲು ಅಧ್ಯಕ್ಷತೆ ವಹಿಸಲಿರುವರು. ಶಾಸಕಿ ಕು.ಭಾಗೀರಥಿ ಮುರುಳ್ಯ ದೀಪ ಪ್ರಜ್ವಲನೆ, ವಾಗ್ಮಿ ಕು.ಶ್ರೀದೇವಿ ಪುತ್ತೂರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಎ.ಒ.ಎಲ್.ಇ ಪ್ರಧಾನ ‌ಕಾರ್ಯದರ್ಶಿ ಅಕ್ಷಯ್ ಕೆ.ಸಿ ಉಪಸ್ಥಿತರಿರುವರು. ಶೋಭಾಯಾತ್ರೆಗೆ ತಾ.ಪಂ.ಮಾಜಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ ಚಾಲನೆ ನೀಡಲಿರುವರು.