ಅವನಿ ಕೋಡಿಬೈಲು ರಿಲಯನ್ಸ್ ಸ್ನಾತಕಪೂರ್ವ ವಿದ್ಯಾರ್ಥಿ ವೇತನಕ್ಕೆ ಆಯ್ಕೆ

0

ಪೆರುವಾಜೆ ಗ್ರಾಮದ ಅವನಿ ಕೋಡಿಬೈಲು ಇವರು ರಿಲಯನ್ಸ್ ಸ್ನಾತಕಪೂರ್ವ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ.
ರಿಲಯನ್ಸ್ ಫೌಂಡೇಶನ್ ಅವರು ನಡೆಸಿರುವ ಯೋಗ್ಯತಾ ಪರೀಕ್ಷೆಯನ್ನು ಇವರು ಪೂರೈಸಿ 2024-2025 ನೇ ಸಾಲಿನ‌ ವಿದ್ಯಾರ್ಥಿ ವೇತನಕ್ಕಾಗಿ ಆಯ್ಕೆಯಾಗಿದ್ದಾರೆ. ರೂ. ಒಂದೂವರೆ ಲಕ್ಷ ವಿದ್ಯಾರ್ಥಿ ವೇತನವನ್ನು ಪಡೆಯಲು ಅರ್ಹತೆಯನ್ನು ಪಡೆದುಕೊಂಡ ಇವರು ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯ,ನೆಹರು ನಗರ ಪುತ್ತೂರು ಇಲ್ಲಿ ಪ್ರಥಮ ಬಿ.ಎಸ್ಸಿ.ಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ.
ಇವರು ಪೆರುವಾಜೆ ಗ್ರಾಮದ ರಾಮಚಂದ್ರ ಕೋಡಿಬೈಲು ಮತ್ತು ಶ್ರೀಮತಿ ಅಶ್ವಿನಿ ಕೋಡಿಬೈಲು ದಂಪತಿ ಪುತ್ರಿ.