ಬೆಳ್ಳಾರೆ : ವಿರಾಟ್ ಫ್ರೆಂಡ್ಸ್ ವತಿಯಿಂದ 53 ನೇ ವರ್ಷದ ಶ್ರೀ ಗಣೇಶೋತ್ಸವ

0

“ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜನರು ಹೆಚ್ಚು ಹೆಚ್ಚು ತೊಡಗಿಕೊಳ್ಳಬೇಕು.ಮಕ್ಕಳನ್ನು ಧಾರ್ಮಿಕ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗಬೇಕು.ಎಲ್ಲರೂ ಒಗ್ಗಟಾಗಿ ಪ್ರೀತಿ,ವಿಶ್ವಾಸದಿಂದ ಕೆಲಸ ಮಾಡಿದಾಗ ಧರ್ಮ,ಸಂಸ್ಕೃತಿ ಉಳಿಯುತ್ತದೆ” ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.


ಅವರು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕ‌ ಸಾಂಸ್ಕೃತಿಕ ಗಣೇಶೋತ್ಸವ ಸಮಿತಿ, ವಿರಾಟ್ ಫ್ರೆಂಡ್ಸ್ ವತಿಯಿಂದ ಸೆ.07 ರಂದು ನಡೆದ 53 ನೇ ವರ್ಷದ ಶ್ರೀ ಗಣೇಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.


ವಿರಾಟ್ ಫ್ರೆಂಡ್ಸ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಅಧ್ಯಕ್ಷತೆ ವಹಿಸಿದ್ದರು.


ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ.ಶ್ರೀಶ ಕುಮಾರ್ ಎಂ.ಕೆ ಧಾರ್ಮಿಕ ಉಪನ್ಯಾಸ ನೀಡಿದರು.

ಶ್ರೀ ಮಹಾಗಣಪತಿಗೆ ಬೆಳ್ಳಿ ಕಿರೀಟ ಸಮರ್ಪಣೆ

ಸೆ.07 ರಂದು ಬೆಳಿಗ್ಗೆ ಶ್ರೀ ಗಣಪತಿ ಪ್ರತಿಷ್ಠೆ ನಡೆಯಿತು.


ಬಳಿಕ ವಿರಾಟ್ ಫ್ರೆಂಡ್ಸ್ ಬೆಳ್ಳಾರೆ ವತಿಯಿಂದ ದಾನಿಗಳ ಸಹಕಾರದಿಂದ ಶ್ರೀ ಮಹಾಗಣಪತಿಗೆ ಕೊಡಮಾಡಲ್ಪಟ್ಟ ಬೆಳ್ಳಿ ಕಿರೀಟವನ್ನು ಶ್ರೀ ಮಹಾಗಣಪತಿಗೆ ಸಮರ್ಪಿಸಲಾಯಿತು.


ಈ ಸಂದರ್ಭದಲ್ಲಿ ವಿರಾಟ್ ಫ್ರೆಂಡ್ಸ್ ಗೌರವಾಧ್ಯಕ್ಷ ಮಿಥುನ್ ಶೆಣೈ, ಅಧ್ಯಕ್ಷ ಸಂತೋಷ್ ಮಣಿಯಾಣಿ,ಕಾರ್ಯದರ್ಶಿ ಜೀವನ್ ಕಾವಿನಮೂಲೆ,ಕೋಶಾಧಿಕಾರಿ ಜೀವನ್ ಬೆಳ್ಳಾರೆ ಹಾಗೂ ಸರ್ವಸದಸ್ಯರು ,ಭಕ್ತಾದಿಗಳು ಉಪಸ್ಥಿತರಿದ್ದರು.


ಈ ಬೆಳ್ಳಿಕಿರೀಟವನ್ನು ಬೆಳ್ಳಾರೆ ಸುಪ್ರಭ ಜ್ಯುವೆಲ್ಲರ್ಸ್ ಮಾಲಕರಾದ ಸತ್ಯನಾರಾಯಣ ಆಚಾರ್ಯ ಮತ್ತು ಪ್ರಸಾದ್ ಆಚಾರ್ಯರವರು ಬೆಳ್ಳಿ ಕಿರೀಟವನ್ನು ತಯಾರಿಸಿದ್ದರು.


ರಾಜಣ್ಣ ಆಚಾರ್ಯ ಶಿಲ್ಪಿಗಳಾಗಿ ಸಹಕರಿಸಿದ್ದರು.


ಸನ್ಮಾನ
ಸುಳ್ಯ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ದೈಹಿಕ ಶಿಕ್ಷಣ,ಶಿಕ್ಷಕ ಕೊರಗಪ್ಪ ನಾಯ್ಕ ಕುರುಂಬುಡೇಲು ರವರನ್ನು ಶಾಲು ಹೊದಿಸಿ ,ಫಲ ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಚೇತನ್ ಸನ್ಮಾನ ಪತ್ರ ವಾಚಿಸಿದರು.


ವೇದಿಕೆಯಲ್ಲಿ ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯ.ಸ.ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಅಧ್ಯಕ್ಷ ಲಕ್ಷ್ಮೀನಾರಾಯಣ ಶ್ಯಾನ್ ಭಾಗ್, ಪೆರುವಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುನಿಲ್ ರೈ ಪೆರುವಾಜೆ, ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಅಧ್ಯಕ್ಷ ಸುನಿಲ್ ರೈ ಪುಡ್ಕಜೆ, ಬೆಳ್ಳಾರೆ ಕೆಪಿಎಸ್ ಉಪಾಧ್ಯಕ್ಷ ಶ್ರೀನಾಥ್ ರೈ ಬಾಳಿಲ, ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ರೊ.ಪದ್ಮನಾಭ ಬೀಡು, ಬೆಳ್ಳಾರೆ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ಬಜನಿ, ಲಯನ್ಸ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ಉಷಾ ಈ.ಭಟ್ ,ವಿರಾಟ್ ಫ್ರೆಂಡ್ಸ್ ಗೌರವಾಧ್ಯಕ್ಷ ಮಿಥುನ್ ಶೆಣೈ, ಕಾರ್ಯದರ್ಶಿ ಜೀವನ್ ಕಾವಿನಮೂಲೆ,ಕೋಶಾದಿಕಾರಿ ಜೀವನ್ ಬೆಳ್ಳಾರೆ ಉಪಸ್ಥಿತರಿದ್ದರು.


ಮನೋಹರ ಬಾಯಂಬಾಡಿ ಸ್ವಾಗತಿಸಿ,ತನುಷಾ ಪಡ್ಪು ಪ್ರಾರ್ಥಿಸಿ,ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿದರು.


ಸೆ.07 ರಂದು ಬೆಳಿಗ್ಗೆ ಗಂಟೆ 8.00 ಶ್ರೀ ಗಣಪತಿ ಪ್ರತಿಷ್ಠೆ ನಡೆಯಿತು. ಬಳಿಕ ಶ್ರೀ ಮಹಾಗಣಪತಿಗೆ ಬೆಳ್ಳಿ ಕಿರೀಟ ಸಮರ್ಪಣೆ ನಡೆಯಿತು. ಪೂರ್ವಾಹ್ನ ಸ್ಪರ್ಧೆಗಳು ಗಣಪತಿ ಹವನ, ಮಹಾಪೂಜೆ,ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ರಾತ್ರಿ ರಂಗಪೂಜೆ,ಮೂಡಸೇವೆ,ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸಂಜೆ ಕುಣಿತ ಭಜನಾ ಕಾರ್ಯಕ್ರಮ ನಡೆಯಿತು.


ಸೆ.08 ರಂದು ಪೂರ್ವಾಹ್ನ ಶ್ರೀ ಗಣಪತಿ ಅಥರ್ವಶೀರ್ಷ ಹವನ,ಭಜನಾ ಕಾರ್ಯಕ್ರಮ, ಮಹಾಪೂಜೆ,ಪ್ರಸಾದ ವಿತರಣೆ ನಡೆಯಿತು. ಅನ್ನಸಂತರ್ಪಣೆ ನಡೆಯಿತು. ಬಳಿಕ ಭಜನಾ ಕಾರ್ಯಕ್ರಮ ನಡೆಯಿತು.
ಸಾಯಂಕಾಲ ಮಹಾಪೂಜೆ,ಮಂಗಳಾರತಿ,ಪ್ರಸಾದ ವಿತರಣೆ ನಡೆಯಿತು. ಬಳಿಕ ವೈಭವದ ಶೋಭಾಯಾತ್ರೆ ಬೆಳ್ಳಾರೆ ಮುಖ್ಯ ರಸ್ತೆಯಲ್ಲಿ ನಡೆದು ಗೌರಿ ಹೊಳೆಯಲ್ಲಿ ಜಲಸ್ತಂಭನ ಮಾಡಲಾಯಿತು.