ಮುಹಿಯದ್ದಿನ್ ಜುಮಾ ಮಸ್ಜಿದ್ ಪೇರಡ್ಕ ಕಂಪ್ಯೂಟರ್,ಪ್ರಿಂಟರ್ ಹಾಗೂ ಕುಡಿಯುವ ನೀರಿನ ಘಟಕ ಲೋಕಾರ್ಪಣೆ

0

ಪೇರಡ್ಕ ಜುಮಾ ಮಸೀದಿಗೆ ಪೇರಡ್ಕ ಜಮಾಯತ್ ದುಬೈ ಸಮಿತಿಯ ಅಧ್ಯಕ್ಷರು ಅನಿವಾಸಿ ಉದ್ಯಮಿಗಳಾದ ಪಿ.ಎಂ.ರಹೀಮ್ ಪೇರಡ್ಕ ಕೊಡುಗೆಯಾಗಿ ನೀಡಿದ ಕಂಪ್ಯೂಟರ್,ಪ್ರಿಂಟರ್,ಕುಡಿಯುವ ನೀರಿನ ವ್ಯವಸ್ತೆಯನ್ನು ಅಲ್ ಹಾಜ್ ಸಯ್ಯದ್ ಝೈನುಲ್ ಅಭಿದೀನ್ ತಂಙಳ್ ಕುಂನ್ನುಂಗೈ ದುಗ್ಗಲಡ್ಕ ಉದ್ಘಾಟಿಸಿದರು ಕೊಡುಗೆ ನೀಡಿದ ರಹೀಮ್ ಪೇರಡ್ಕರವರ ಕುಟುಂಬಕ್ಕೆ ವಿಶೇಷ ಪ್ರಾರ್ಥನೆ ಮಾಡಿ ಸಮಾಜದಲ್ಲಿ ಎಲ್ಲಾ ಕಡೆ ಸಾಮಾಜಿಕ ಸೇವೆ ಮಾಡುವುದರಿದ್ದಾರೆ ಆದರೆ ವಿಶೇಷ ವಾಗಿ ವಿದೇಶದಲ್ಲಿ ದುಡಿದು ತನಗೆ ದೊರಕುವ ಸಂಪಾದನೆಯಲ್ಲಿ ತನ್ನೂರಿನ ಶಾಲೆ, ಮದರಸ,ಇನ್ನಿತರ ಸಾಮಾಜಿಕ ಕೆಲಸಗಳಿಗೆ ಸಹಾಯ ಮಾಡುತ್ತಿದ್ದಾರೆ ಅವರ ಕೊಡುಗೆಯಿಂದ ಸಮಾಜ ಅಭಿವೃದ್ಧಿ ಸಾಧ್ಯವಾಗಿದೆ ಅವರ ಸಾಮಾಜಿಕ ಸೇವೆಗೆ ಗೌರವಿಸಿ ಹಾರೈಸಿದರು .

ಜುಮಾ ಮಸೀದಿ ಖತಿಬರಾದ ನಹೀಮ್ ಫೈಝಿ,ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಂ ಆರ್ ಡಿ ಎ ಅಧ್ಯಕ್ಷರಾದ ಜಿ.ಕೆ.ಹಮೀದ್ ಗೂನಡ್ಕ,ಸುಳ್ಯ ನಗರ ಪಂಚಾಯತ್ ಸದಸ್ಯರಾದ ಉಮ್ಮರ್ ಕೆ.ಎಸ್.ಜಮಾಯತ್ ಉಪಾಧ್ಯಕ್ಷರಾದ ಟಿ.ಬಿ.ಹನೀಫ್ ಪ್ರದಾನ ಕಾರ್ಯದರ್ಶಿ ಉಮ್ಮರ್ ಪಿ.ಕೆ.ಕಾರ್ಯದರ್ಶಿ ಉಸ್ಮಾನ್.ತೆಕ್ಕಿಲ್ ಮಹಮ್ಮದ್ ಕುಂಞಿ ಪೇರಡ್ಕ ,ಎಸ್ ಕೆ.ಎಸ್.ಎಸ್.ಎಫ್ ಅಧ್ಯಕ್ಷರಾದ ಮುನೀರ್ ಧಾರಿಮಿ,ರಝಕ್ ಹಾಜಿ.ಪಾಂಡಿ ಅಬ್ಬಾಸ್, ಡಿ.ಎ.ಮೊಯ್ದು ದರ್ಕಸ್.ಸಾಧುಮನ್ ತೆಕ್ಕಿಲ್ ಪೇರಡ್ಕ,ಸಾಜೀದ್ ಆಝ್ಹರಿ ,ಟಿ ಎಂ ರಜಾಕ್ ಹಾಜಿ ದರ್ಕಾಸ್, ಹನೀಫ್ ಮೊಟ್ಟೆಂಗಾರ್, ಇರ್ಷಾದ್ ಪೇರಡ್ಕ , ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಜಮಾಯತರು ಉಪಸ್ಥಿತರಿದ್ದರು.