ಸುಭಿಕ್ಷಾ ಆರ್ಗ್ಯಾನಿಕ್ ಫಾರ್ಮರ್ಸ್ ಮಲ್ಟಿಸ್ಟೇಟ್ ಕೋಆಪರೇಟಿವ್ ಸೊಸೈಟಿ ಲಿ. ನಿರ್ದೇಶಕರಾಗಿ ಜಯಪ್ರಕಾಶ್ ಕೂಜುಗೋಡು

0

ಶಿವಮೊಗ್ಗ ಕೇಂದ್ರ ಕಛೇರಿ ಹೊಂದಿರುವ ಸುಭಿಕ್ಷಾ ಆರ್ಗ್ಯಾನಿಕ್ ಫಾರ್ಮರ್ಸ್ ಮಲ್ಟಿಸ್ಟೇಟ್ ಕೋಆಪರೇಟಿವ್ ಸೊಸೈಟಿ ಲಿಮಿಟೆಡ್ ಸಂಸ್ಥೆಯ ಎರಡನೇ ಅವಧಿಯ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ನಿರ್ದೇಶಕರಾಗಿ ಸುಬ್ರಹ್ಮಣ್ಯ ಐನೆಕಿದು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಕೂಜುಗೋಡು ಅವರು ಆಯ್ಕೆಯಾಗಿರುವುದಾಗಿ ತಿಳಿದು ಬಂದಿದೆ.

ಕೇಂದ್ರ ಸರಕಾರದ ಸಹಕಾರ ಮಂತ್ರಾಲಯದ ಮಾರ್ಗದರ್ಶನದಂತೆ ನಡೆಯುವ ಸಂಸ್ಥೆ ಇದಾಗಿದ್ದು .


ಆನಂದ ಆ. ಅಧ್ಯಕ್ಷರಾಗಿದ್ದು, ಈರಪ್ಪ ಹೊಸಮನಿ ಎಂಬವರು ಉಪಾಧ್ಯಕ್ಷರಾಗಿದ್ದಾರೆ.


ದ.ಕ ಜಿಲ್ಲೆ ಮತ್ತು ಕಾಸರಗೋಡು ಜಿಲ್ಲೆಯಲ್ಲಿ ಸಾವಯವ ಉತ್ಪನ್ನಗಳ ಮಾರಾಟ ಮಳಿಗೆಯನ್ನು ತೆರೆಯುವ ಉದ್ದೇಶವನ್ನು ಸಂಸ್ಥೆ ಹೊಂದಿರುವುದಾಗಿ ತಿಳಿದು ಬಂದಿದೆ.