ಸುಳ್ಯ ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿದೋದ್ಧೇಶ ಸಹಕಾರ ಸಂಘದ ಮಹಾಸಭೆ

0

ಸುಳ್ಯ ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿದೋದ್ಧೇಶ ಸಹಕಾರ ಸಂಘದ ಮಹಾಸಭೆಯು ಸೆ.19ರಂದು ಸುಳ್ಯ ಅಂಬಟೆಡ್ಕದಲ್ಲಿರುವ ಮರಾಟಿ ಸಮಾಜ ಸೇವಾ ಸಂಘ ಗಿರಿದರ್ಶಿನಿ ಮಂದಿರದಲ್ಲಿ ನಡೆಯಿತು. ‌

ಸಂಘದ ಅಧ್ಯಕ್ಷ ಸೀತಾನಂದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ, ನಿರ್ದೇಶಕರಾದ ಶ್ರೀಮತಿ ರೇವತಿ ಪಿ.‌ಅಜ್ಜಾವರ, ಎಂ. ವಿಠಲ ನಾಯ್ಕ ಎಡಮಂಗಲ, ಬಿ.‌ಸುಬ್ಬಣ್ಣ ನಾಯ್ಕ ಗುತ್ತಿಗಾರು, ಮಾಧವ ಡಿ. ಸುಬ್ರಹ್ಮಣ್ಯ, ಶ್ರೀಮತಿ ನೀಲಮ್ಮ ಕೆ. ಅಮರಪಡ್ನೂರು, ವಿಮಲಾಕ್ಷಿ ಟಿ. ಆಲೆಟ್ಟಿ ಉಪಸ್ಥಿತರಿದ್ದರು. ‌

2023-24ನೇ ಸಾಲಿನಲ್ಲಿ 10 ಲಕ್ಷದ 29 ಸಾವಿರ ಲಾಭ ಹೊಂದಿದ್ದು, ಸದಸ್ಯರಿಗೆ ಶೇ.3.5 ಡಿವಿಡೆಂಡ್ ವಿತರಿಸುವ ಬಗ್ಗೆ ಅಧ್ಯಕ್ಷ ಸೀತಾನಂದರವರು ಘೋಷಿಸಿದರು.

ಸಭೆಯಲ್ಲಿ ಸಿಬ್ಬಂದಿ ನೇಮಕಾತಿ, ಸಾಲ ವಸೂಲಾತಿ ಮತ್ತಿತರ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.‌

ರಘುನಾಥ ಜಟ್ಟಿಪಳ್ಳ‌ ಕಾರ್ಯಕ್ರಮ ನಿರೂಪಿಸಿದರು.

2023.24ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ.‌ ಮತ್ತು ಪಿ.ಯು.ಸಿ.ಯಲ್ಲಿ ಡಿಸ್ಟಿಂಕ್ಷನ್ ಪಡೆದ ಸದಸ್ಯರ ಮಕ್ಕಳನ್ನು ಪುರಸ್ಕರಿಸಲಾಯಿತು.‌