ಸುಳ್ಯ ನಗರದ ಅಲ್ಲಲ್ಲಿ ರಸ್ತೆ ಬದಿಯಲ್ಲಿರುವ ಅಪಾಯಕಾರಿ ಗುಂಡಿ ಜನರನ್ನು ಅಪಾಯಕ್ಕೆ ಸಿಲುಕಿಸಲಿದೆ.
ಸುಳ್ಯ ಜೂನಿಯರ್ ಕಾಲೇಜು ರಸ್ತೆಯ ರಾಮ ಹೋಟೆಲ್ ಗೆ ತಿರುಗುವಲ್ಲಿ ರಸ್ತೆ ಬದಿ ಗುಂಡಿ ನಿರ್ಮಾಣವಾಗಿದೆ. ಮುಖ್ಯ ರಸ್ತೆಯ ದ್ವಾರಕ ಹೋಟೆಲ್ ನ ಎದುರುಗಡೆಯ ಚರಂಡಿ ಸ್ಲಾಬ್ ಬಿದ್ದಿದು ಪಾದಾಚಾರಿಗಳಿಗೆ ಅಪಾಯಕಾರಿಯಾಗಿದೆ.
ಹೀಗೆ ನಗರದ ಹಲವಾರು ಕಡೆ ಇಂತಹ ಗುಂಡಿ ನಿರ್ಮಾಣವಾಗಿದ್ದು, ಸಂಬಂಧಪಟ್ಟವರು ಗಮನ ಹರಿಸಬೇಕಾಗಿದೆ.