ಗಾಂಧಿನಗರ :ಸುಳ್ಯ ತಾಲೂಕು ಮೀಲಾದ್ ಸಮಿತಿ ವತಿಯಿಂದ ಸಾರ್ವಜನಿಕ ಸಭೆ ಹಾಗೂ ಮಿಲಾದ್ ಸಂದೇಶ ಪ್ರಭಾಷಣ

0

ಅವರವರ ಧರ್ಮದ ಮಹಾನುಭಾವರನ್ನು ಸ್ಮರಿಸುವುದು ಉತ್ತಮ ಕಾರ್ಯ:ಶ್ರೀ ಶ್ರೀಮದ್ ಸ್ವಾಮಿ

ಯಾವುದೇ ವ್ಯಕ್ತಿಗಳು ತಮ್ಮ ತಮ್ಮ ಧರ್ಮದ ಮಹಾನುಭಾವರನ್ನು ಗುರುವರ್ರ್ಯರುಗಳನ್ನು ಸ್ಮರಿಸುಹುದು ಉತ್ತಮ ಕಾರ್ಯವಾಗಿದೆ.ಅವರು ನಡೆದ ಹಾದಿಗಳು ಅವರಲ್ಲಿದ್ದ ದೈವ ಭಕ್ತಿ ಅನುಸರಣೆಯಿಂದ ಕೂಡಿದ್ದಾಗಿದೆ.
ಅದುವೇ ಅವರ ಧರ್ಮಗಳ ಸಂದೇಶವಾಗಿರುತ್ತದೆ.
ಅವರಲ್ಲಿದ್ದ ಭಕ್ತಿ ಮತ್ತು ದಯೆ ಕರುಣೆಗಳನ್ನು ನೋಡಿ ತಪ್ಪು ಹಾದಿಯಲ್ಲಿ ಇದ್ದವರು ಮನ ಪರಿವರ್ತನೆ ಮಾಡಿಕ್ಕೊಂಡಿದ್ದಾರೆ ವಿನಹ ಯಾರೂ ಕೂಡ ಧರ್ಮ ಪರಿವರ್ತನೆ ಮಾಡಿಕ್ಕೊಂಡಿದ್ದಲ್ಲ. ಅಲ್ಲದೇ ಪ್ರತಿಯೊಬ್ಬ ಮನುಷ್ಯನು ಕೆಟ್ಟದ್ದನ್ನು ವಿರೋಧಿಸಿ ತಪ್ಪನ್ನು ತಪ್ಪು ಎಂದು ಹೇಳುವವರು ಮಾತ್ರ ಇಲ್ಲಿ ಭೋಧನೆ ಮಾಡಲು ಅರ್ಹರು. ಅಲ್ಲದೇ ದೇವರ ಹೆಸರಿನಲ್ಲಿ ತಪ್ಪನ್ನೆ ಮಾಡುವವರನ್ನು ಜನರು ಎಂದಿಗೂ ಸ್ಮರಿಸುವುದಿಲ್ಲ ಎಂದು ಶ್ರೀ ಶ್ರೀಮದ್ ಸ್ವಾಮಿ ಆತ್ಮದಾಸ್ ಯಾಮಿ ಯವರು ಹೇಳಿದರು.

ಸುಳ್ಯ ತಾಲೂಕು ಮೀಲಾದ್ ಸಮಿತಿ ವತಿಯಿಂದ ಸೆ 20 ರಂದು ಗಾಂಧಿನಗರದಲ್ಲಿ ನಡೆದ ಮೀಲಾದ್ ಸಾರ್ವಜನಿಕ ಸಭೆಯಲ್ಲಿ ಪ್ರವಾದಿ ಸಂದೇಶ ಕಾರ್ಯಕ್ರಮದ ಕುರಿತು ಮುಖ್ಯ ಪ್ರಭಾಷಣ ಕಾರರಾಗಿ ಭಾಗವಹಿಸಿ ಮಾತನಾಡಿದ ಅವರು ‘ಪ್ರವಾದಿ ಮಹಮ್ಮದ್ ರವರು ಓರ್ವ ಮೇರು ವ್ಯಕ್ತಿತ್ವದ ವ್ಯಕ್ತಿಯಾಗಿದ್ದು ಅವರ ಅನುಯಾಯಿಗಳಾದ ಎಲ್ಲರು ಕೂಡ ಕರುಣೆ ಮತ್ತು ಪ್ರೀತಿಯಿಂದಲೇ ಬದುಕನ್ನು ಬದುಕಬೇಕು ಎಂದು ಹೇಳಿದವರು. ಪ್ರವಾದಿಯವರು ಅಂದು ಮನುಷ್ಯರು ಮಾಡುವ ತಪ್ಪುಗಳನ್ನು ತಿದ್ದಿ ಹೇಳುವ ಮೂಲಕ ಜನರನ್ನು ತನ್ನೆಡೆಗೆ ಸೆಳೆದು ಮನ ಪರಿವರ್ತನೆ ಮಾಡುವ ಮೂಲಕ ಜಗತ್ತಿನಲ್ಲಿ ಇಂದಿಗು ಎಲ್ಲರು ಸ್ಮರಿಸುವಂತಹ ಓರ್ವ ದೇವತಾ ವ್ಯಕ್ತಿಯಾಗಿದ್ದಾರೆ.ಯಾವುದೇ ಧರ್ಮವಾಗಿರಲಿ ಜನರು ಆ ಧರ್ಮದ ಮಹಾನ್ ವ್ಯಕ್ತಿಗಳ ಅನುಯಾಯಿಗಳಾಗಬೇಕೇ ಹೊರತು ಅನುಕೂಲಕ್ಕಾಗಿ ಅನುಯಾಯಿಗಳಾಗ ಬಾರದು ಎಂದು ಹೇಳಿದರು.

ಅವರು ತಮ್ಮ ಭಾಷಣದ ಆರಂಭದಲ್ಲಿ ಪವಿತ್ರ ಗ್ರಂಥಗಳಾದ ಖುರಾನ್, ಬೈಬಲ್, ಭಗವತ್ ಗೀತೆಯ ಅಧ್ಯಾಯವನ್ನು ಪಠಿಸುವ ಮೂಲಕ ಮಾತು ಆರಂಭಿಸಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೀಲಾದ್ ಸಮಿತಿ ಅಧ್ಯಕ್ಷ ಶರೀಫ್ ಕಂಠಿ ವಹಿಸಿ ಸರ್ವರನ್ನು ಸ್ವಾಗತಿಸಿದರು.

ಸಂಚಾಲಕರಾದ ಉಮ್ಮರ್ ಕೆ ಎಸ್ ಪ್ರಾಸ್ತವಿಕ ಮಾತುಗಳನ್ನಾಡುತ್ತಾ ಇಂದಿನ ರ್ಯಾಲಿಯಲ್ಲಿ ಮುಸ್ಲಿಂ ಸಮುದಾಯದ ಸಂಪ್ರದಾಯ ಮತ್ತು ಸೌಹಾರ್ದತೆಯನ್ನು ತಿಳಿಸಲು ಸಾಧ್ಯವಾಗಿದೆ.
ನಮ್ಮ ಕಲೆಯಲ್ಲಿ ಮುಖ್ಯವಾದ ದಫ್ ಗಳ ಪ್ರದರ್ಶನ ಮಾಡುವ ಮೂಲಕ ಇಂದು ಸುಳ್ಯದಲ್ಲಿ ಇಸ್ಲಾಂ ಸೌಹಾರ್ದತೆಯನ್ನು ತೋರಿಸಿಕೊಟ್ಟಿದೆ ಎಂದು ಹೇಳಿದರು.

ಸಯ್ಯಿದ್ ಕುಂಞಿಕೋಯ ತಂಙಳ್ ಸಅದಿ ಸುಳ್ಯ ರವರು ಪ್ರಾರ್ಥನೆ ನೆರವೇರಿಸಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಭಾ ವೇದಿಕೆಯಲ್ಲಿ ಮುಸ್ಲಿಮ್ ಧಾರ್ಮಿಕ ಪಂಡಿತರು ವಾಗ್ಮಿಗಳಾದ ಎಂ.ಎಸ್.ಎಂ. ಅಬ್ದುಲ್ ರಶೀದ್ ಝೖನಿ ಖಾಮಿಲ್ ಸಖಾಫಿ, ಮೌಲಾನಾ ಅಝೀಝ್ ಧಾರಿಮಿ ಚೊಕ್ಕಬೆಟ್ಟು ಹಾಗೂ ಸುಹೈಲ್ ಧಾರಿಮಿ ನಾಪೋಕ್ಲು ರವರು ಉಪಸ್ಥಿತರಿದ್ದು ಪ್ರವಾದಿಯವರು ಲೋಕಕ್ಕೆ ಸಾರಿದ ಶಾಂತಿ ಸಂದೇಶ ಮತ್ತು ಸೌಹಾರ್ದತೆಯ ಕುರಿತು ಮಾತನಾಡಿದರು.

ವೇದಿಕೆಯಲ್ಲಿ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ಪ್ರಮುಖರಾದ ಸಯ್ಯಿದ್ ಹುಸೈನ್ ತಂಙಳ್ ಆದೂರು, ಹಾಜಿ ಇಸಾಕ್ ಸಾಹೇಬ್ ಪಾಜಪಳ್ಳ, ಮಹಮ್ಮದ್ ಇಕ್ಬಾಲ್ ಎಲಿಮಲೆ, ಹಾಜಿ ಅಬ್ದುಲ್ಲಾ ಕಟ್ಟೆಕ್ಕಾರ್ಸ್,ಹಾಜಿ ಮುಸ್ತಫಾ ಜನತಾ,ಉದ್ಯಮಿ ಅಬ್ದುಲ್ ರಹಿಮಾನ್ ಸಂಕೇಶ್,ಹಾಜಿ ಮಹಮ್ಮದ್ ಕೆ ಎಂ ಎಸ್,ಹಾಜಿ ಅಬ್ದುಲ್ ಮಜೀದ್ ಜನತಾ, ವಕೀಲ ಪವಾಝ್ ಕನಕಮಜಲು, ಎ.ಬಿ.ಅಶ್ರಫ್ ಸಅದಿ, ಹಾಜಿ ಇಬ್ರಾಹಿಂ ಕತ್ತರ್ ಮಂಡೆಕೋಲು,ಆದಂ ಹಾಜಿ ಕಮ್ಮಾಡಿ,ಇಸ್ಮಾಯಿಲ್ ಪಡ್ಡಿನಂಗಡಿ, ಮಹಮ್ಮದ್ ಕುಂಞ ಗೂನಡ್ಕ,ಶಾಹುಲ್ ಹಮೀದ್ ಕುತ್ತಮೊಟ್ಟೆ,ಅಬೂಬಕ್ಕರ್ ಪೂಪಿ, ಇಬ್ರಾಹಿಂ ಪಿ ಪೈಚಾರ್, ಲತೀಫ್ ಹರ್ಲಡ್ಡ, ಅಬೂಬಕ್ಕರ್ ಹಾಜಿ ಮಂಗಳ, ಅಬ್ದುಲ್ ಖಾದ‌ರ್ ಹಾಜಿ ಬಾಯಂಬಾಡಿ, ಎಸ್.ಸಂಶುದ್ದೀನ್ ಅರಂಬೂರು, ಹಮೀದ್ ಬೀಜಕೊಚ್ಚಿ,ಹಾಜಿ ಅಬ್ದುಲ್ ರಝಕ್ ರಾಜಧಾನಿ ಮೊದಲಾದವರು ಉಪಸ್ಥಿತರಿದ್ದರು.

ಸಭಾ ವೇದಿಕೆಯಲ್ಲಿ ರಂಜಿಸಿದ ದಫ್ ಪ್ರದರ್ಶನ

ಸಭಾ ಕಾರ್ಯಕ್ರಮಕ್ಕೆ ಮುನ್ನ ತಾಲೂಕಿನ ಮತ್ತು ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ದಫ್ ತಂಡಗಳಿಂದ ಆಕರ್ಷಕ ದಫ್ ಪ್ರದರ್ಶನ ನಡೆಯಿತು.ಅರಬನ ಮುಟ್ಟ್, ಪುಟಾಣಿ ಮಕ್ಕಳ ಹೆಜ್ಜೆ ಬದಲಾವಣೆ ಪ್ರದರ್ಶನ, ದಫ್ ಗೀತೆ ನೋಡುಗರ ಗಮನ ಸೆಳೆಯಿತು.
ಭಾಗವಹಿಸಿದ್ದ ಎಲ್ಲಾ ತಂಡಗಳಿಗೆ ಸಂಘಟನೆಯ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕು ಪರಿಸರದ ಸಾವಿರಾರು ಮಂದಿ ಮುಸಲ್ಮಾನ ಭಾಂದವರು ಪಾಲ್ಗೊಂಡಿದ್ದರು.

ಎಸ್ ಪಿ ಹಾಗೂ ಅಡಿಷನಲ್ ಎಸ್ ಪಿ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್

ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿತ್ತು.

ಮಂಗಳೂರು ಪೊಲೀಸ್ ಅಧೀಕ್ಷಕ ಯತೀಶ್ ಎನ್ ಹಾಗೂ ಅಡಿಷನಲ್ ಎಸ್ ಪಿ ರಾಜೇಂದ್ರ ರವರು ಕಾರ್ಯಕ್ರಮದ ವೇಳೆ ಸ್ಥಳದಲ್ಲಿ ಮಕಾಂ ಹೂಡಿ ಪರಿಶೀಲನೆ ನಡೆಸುತ್ತಿದ್ದರು.

ಪುತ್ತೂರು ವಿಭಾಗದ ಡಿ ವೈ ಎಸ್ ಪಿ ಅರುಣ್ ನಾಗೇ ಗೌಡ, ಸುಳ್ಯ, ಉಪ್ಪಿನಂಗಡಿ,ಪುತ್ತೂರು ಪೊಲೀಸ್ ವೃತ್ತ ನಿರೀಕ್ಷಕರು, ಸುಳ್ಯ, ಬೆಳ್ಳಾರೆ, ಸುಬ್ರಹ್ಮಣ್ಯ ಠಾಣೆಗಳ ಉಪನಿರೀಕ್ಷಕರುಗಳು ಹಾಗೂ ನೂರಾರು ಸಿಬ್ಬಂದಿಗಳೊಂದಿಗೆ ಸುಳ್ಯ ಹಾಗೂ ಪರಿಸರದಲ್ಲಿ ನಿಗಾ ವಹಿಸಿದ್ದರು.

ಸಮಿತಿಯ ಉಪಾಧ್ಯಕ್ಷರುಗಳಾದ ಸಿದ್ದೀಕ್ ಕೊಕ್ಕೊ, ಜುನೈದ್ ಎನ್ ಎ, ರಶೀದ್ ಜಟ್ಟಿಪಳ್ಳ, ಸಂಚಾಲಕ ಅಬ್ದುಲ್ ಕಲಾಂ, ಪ್ರ. ಕಾರ್ಯದರ್ಶಿ ಅಬ್ದುಲ್ ಅಝೀಜ್ ಸಂಗಮ್, ಕಾರ್ಯದರ್ಶಿ ಗಳಾದ ಉನೈಸ್ ಪೆರಾಜೆ, ಇಕ್ಬಾಲ್ ಸುಣ್ಣಮೂಲೆ, ನವಾಜ್ ಪಂಡಿತ್, ಕಲಂದರ್ ಎಲಿಮಲೆ, ಹಾಗೂ ಸರ್ವ ಸದಸ್ಯರುಗಳು ಸಹಕರಿಸಿದರು.