ಅಧಿಕಾರಿಗಳ ಜೊತೆ ಶಾಸಕರ ಸಮಾಲೋಚನೆ

0

ಗಾಂಧಿ ನಡಿಗೆ ಮತ್ತು ಗಾಂಧಿ ಪ್ರತಿಮೆಅನಾವರಣ ಕಾರ್ಯಕ್ರಮ ಯಶಸ್ವಿಗೊಳಿಸಲು ಸೂಚನೆ

ಅಕ್ಟೋಬರ್ ೨ರಂದು ಬುಧವಾರ ಗಾಂಧಿ ಜಯಂತಿಯ ದಿನ ಸುಳ್ಯದಲ್ಲಿ ಗಾಂಧಿ ಚಿಂತನ ವೇದಿಕೆ ಮತ್ತು ನಗರ ಪಂಚಾಯತ್ ಸಹಯೋಗದಲ್ಲಿ ನಡೆಯುವ ಗಾಂಧಿ ನಡಿಗೆ ಮತ್ತು ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕು. ಭಾಗೀರಥಿ ಮುರುಳ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೆ. 19ರಂದು ತಾಲೂಕು ಪಂಚಾಯತ್‌ನ ಶಾಸಕ ಕಚೇರಿಯಲ್ಲಿ ತಾ.ಪಂ. ಇ.ಓ. ರಾಜಣ್ಣ, ತಹಶೀಲ್ದಾರ್ ಎಂ. ಮಂಜುನಾಥ್ ಹಾಗೂ ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ ಎಂ.ಎಚ್. ಅವರೊಂದಿಗೆ ಚರ್ಚಿಸಿದ ಅವರು, ಸುಳ್ಯ ನಗರ ವ್ಯಾಪ್ತಿಯ ಎಲ್ಲಾ ಪ್ರೌಢಶಾಲೆ ಜೂನಿಯರ್ ಕಾಲೇಜ್ ಮತ್ತು ಪದವಿ ಕಾಲೇಜುಗಳ ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳು ಭಾಗವಹಿಸುವಂತೆ ವ್ಯವಸ್ಥೆಗೊಳಿಸಿ, ನಗರ ವ್ಯಾಪ್ತಿಯ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಗಾಂಧಿನಗರದಲ್ಲಿ ಆಚರಿಸುವಂತೆ ಮಾಡಿ ಎಂದವರು ಸೂಚನೆ ನೀಡಿದರು.


ಬೆಳಿಗ್ಗೆ 9. ೦೦ ಯಿಂದ 9:3೦ವರೆಗೆ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿ 9:45 ಕ್ಕೆ ಜ್ಯೋತಿ ಸರ್ಕಲ್ ನಲ್ಲಿ ಸೇರುವುದು ಮತ್ತು 1೦ ಗಂಟೆಗೆ ಸರಿಯಾಗಿ ಜ್ಯೋತಿ ಸರ್ಕಲ್ ನಿಂದ ಗಾಂಧಿನಗರದ ಕಡೆ, ಗಾಂಧಿ ನಡಿಗೆ ಆರಂಭಿಸುವುದು, ಗಾಂಧಿನಗರದ ಪಾರ್ಕ್ ಬಳಿ ಕಾರ್ಯಕ್ರಮ ಆಯೋಜಿಸುವುದೆಂದು ನಿರ್ಧರಿಸಲಾಯಿತು. ಕಾರ್ಯಕ್ರಮದ ಯಶಸ್ವಿಗಾಗಿ ಚರ್ಚಿಸಲು ಸೆಪ್ಟೆಂಬರ್ 23 ಸೋಮವಾರ ಮಧ್ಯಾಹ್ನ 3 ಗಂಟೆಗೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳ ನಗರ ಪಂಚಾಯತಿ ಸದಸ್ಯರುಗಳ ಹಾಗೂ ಅಂಕ ಸಂಸ್ಥೆಗಳ ಪ್ರಮುಖರ ಸಭೆಯನ್ನು ತಾ.ಪಂ. ಸಭಾಂಗಣದಲ್ಲಿ ಕರೆಯುವುದೆಂದು ನಿರ್ಧರಿಸಲಾಯಿತು. ಚಿಂತನ ವೇದಿಕೆಯ ಸಂಚಾಲಕ ಹರೀಶ್ ಬಂಟ್ವಾಳ್ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ವಿವರಿಸಿದರು.


ಈ ಸಂದರ್ಭ ಹರೀಶ್ ಕಂಜಿಪಿಲಿ, ಸಂತೋಷ್ ಜಾಕೆ, ಗೋವಿಂದ ಅಳವುಪಾರೆ, ದಿನೇಶ್ ಹೆಗ್ಡೆ, ಸುನಿಲ್ ಕೇರ್ಪಳ ಮೊದಲಾದವರಿದ್ದರು.

ಚುನಾವಣಾ ನೀತಿ ಸಂಹಿತೆ ಸೋಮವಾರದ ಸಭೆ ರದ್ದು

ಅ. 2 ರ ಗಾಂಧಿ ನಡಿಗೆ ಹಾಗೂ ಗಾಂಧಿ ಜಯಂತಿ ಕಾರ್ಯಕ್ರಮದ ಯಶಸ್ವಿಗಾಗಿ ಚರ್ಚಿಸಲು ಕರೆಯಲು ನಿರ್ಧರಿಸಲಾಗಿದ್ದ ಸೋಮವಾರದ ಸಭೆಯನ್ನು ಎಂಎಲ್ಸಿ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ಕಾರಣದಿಂದಾಗಿ ರದ್ದುಗೊಳಿಸಲಾಗಿದೆ. ಆದರೆ ಸ್ವಚ್ಛತಾ ಕಾರ್ಯಕ್ರಮದ ಹಾಗೂ ಗಾಂಧಿ ನಡಿಗೆ ಕಾರ್ಯಕ್ರಮ ನಿಗದಿಯಂತೆ ನಡೆಯಲಿದ್ದು, ಎಲ್ಲಾ ಸಂಘ-ಸಂಸ್ಥೆಯವರು ಹಾಗೂ ಇತರ ಆಸಕ್ತರು ಭಾಗವಹಿಸಬೇಕೆಂದು ಗಾಂಧಿಜಿಂತನ ವೇದಿಕೆ ಸಂಚಾಲಕ ಹರೀಶ್ ಬಂಟ್ವಾಳ ತಿಳಿಸಿದ್ದಾರೆ.