ಕ್ಯಾಂಪ್ಕೊ ನಿಯಮಿತ ಮಂಗಳೂರು, ಸಂಸ್ಥೆಯಿಂದ ಸದಸ್ಯ ಬೆಳೆಗಾರರಿಗಾಗಿ ರೂಪಿಸಲಾದ ವಿವಿಧ ಸಹಾಯಧನ ಯೋಜನೆಗಳಡಿಯಲ್ಲಿ ಸಂಸ್ಥೆಯ ಸಕ್ರಿಯ ಸದಸ್ಯರ ಕುಟುಂಬದವರ ಕೃಷಿ ವಿಜ್ಞಾನಕ್ಕೆ ಸಂಬಂಧಿಸಿದ ಉನ್ನತ ಶಿಕ್ಷಣಕ್ಕಾಗಿ ನೀಡಲಾಗುವ ಒಂದು ಲಕ್ಷ ರೂಪಾಯಿ (₹ 1,00,000)ಮೊತ್ತದ ಸಹಾಯಧನದ ಮೊದಲನೇ ಕಂತಾದ ಐವತ್ತು ಸಾವಿರ ರೂಪಾಯಿ (₹ 50,000)ಯನ್ನು ಕ್ಯಾಂಪ್ಕೊ ಸಂಸ್ಥೆಯ ಕಡಬ ಶಾಖೆಯ ಸಕ್ರಿಯ ಸದಸ್ಯರಾದ ಜಯಚಂದ್ರ ರೈ ಅವರ ಪುತ್ರಿ ಕು.ಶ್ರೇಯಾ ಅವರ M.Sc(Hort.)Plantetion,Spices,Medicinal & Aromatic Crops ಶಿಕ್ಷಣಕ್ಕಾಗಿ ಸೆ.20ರಂದು ಕ್ಯಾಂಪ್ಕೊ ಕಡಬ ಶಾಖೆಯಲ್ಲಿ ಸಂಸ್ಥೆಯ ಗೌರವಾನ್ವಿತ ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲ ಅವರು ಜಯಚಂದ್ರ ರೈ ಅವರಿಗೆ ಹಸ್ತಾoತರಿಸಿದರು. ಈ ಸಂದರ್ಭದಲ್ಲಿ ಕ್ಯಾಂಪ್ಕೊ ಪುತ್ತೂರು ಪ್ರಾದೇಶಿಕ ಪ್ರಭಂಧಕರಾದ ಪ್ರಕಾಶ ಕುಮಾರ ಕೆ ಶೆಟ್ಟಿ, ಕ್ಯಾಂಪ್ಕೊ ಕಡಬ ಶಾಖಾ ಪ್ರಭಂದಕರಾದ ಮಹೇಶ ಕೆ.ಎನ್., ಸದಸ್ಯರು ಹಾಗು ಶಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು.