ಬೆಳ್ಳಾರೆ ಜಾಸ್ & ಮ್ಯುಸಿಕ್ ಸಂಸ್ಥೆಯಿಂದ ಸಂಗೀತ ಸಂಭ್ರಮ – ಸೀಸನ್ 6

0

ಶ್ರೀನಿವಾಸ್ ಬೆಳ್ಳಾರೆ ಸಂಘಟನೆಯಲ್ಲಿ ಜಾಸ್ & ಮ್ಯುಸಿಕ್ ಸಂಗೀತ ಸಂಭ್ರಮ-ಸೀಸನ್ 6 ಸೆ. 22ರಂದು ಬೆಳ್ಳಾರೆಯ ಸಿ.ಎ. ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.
ಸಂಘಟಕ ಶ್ರೀನಿವಾಸ್ ಮತ್ತು ತಂಡದವರು ಕಾರ್ಯಕ್ರಮ ಉದ್ಘಾಟಿಸಿದರು. ಸುದ್ದಿ ಪತ್ರಿಕೆಯ ವರದಿಗಾರ ಈಶ್ವರ ವಾರಣಾಶಿ ಮತ್ತು ಸ್ಪರ್ಧೆಗೆ ಆಗಮಿಸಿದ ಗಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಂಜೆ ಕಾರ್ಯಕ್ರಮ ಸಮಾರೋಪ ನಡೆಯಲಿದೆ.