ಬೆಳ್ಳಾರೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ,ಗುರುಪೂಜೆ,ಪ್ರತಿಭಾ ಪುರಸ್ಕಾರ ಸನ್ಮಾನ

0

ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ,ಸಿದ್ಧಾಂತದಿಂದ ನೆಮ್ಮದಿಯ ಜೀವನ – ಸತ್ಯಜಿತ್ ಸುರತ್ಕಲ್

ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಸುಳ್ಯ,ಯುವವಾಹಿನಿ ಸುಳ್ಯ ಘಟಕ ವತಿಯಿಂದ 170 ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ,ಗುರುಪೂಜೆ,ಪ್ರತಿಭಾ ಪುರಸ್ಕಾರ ,ಸನ್ಮಾನ ಕಾರ್ಯಕ್ರಮವು ಸೆ.22 ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಪುರೋಹಿತರಾದ ಪಿ.ಡಿ.ಹರೀಶ ಶಾಂತಿ ಪುತ್ತೂರು ಇವರ ನೇತೃತ್ವದಲ್ಲಿ ನಡೆಯಿತು.
ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.
ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘದ ಅಧ್ಯಕ್ಷ ಎ.ಕೃಷ್ಣಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದರು.


ವಿಜಯ ಕರ್ನಾಟಕ ಜಿಲ್ಲಾ ವರದಿಗಾರರಾದ ಸಂತೋಷ್ ಮರಕ್ಕಡ ಧಾರ್ಮಿಕ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಬೆಳ್ಳಾರೆ ಡಿಸಿಸಿ ಬ್ಯಾಂಕ್ ಶಾಖಾಧಿಕಾರಿ ಸಂತೋಷ್ ಮರಕ್ಕಡ,ಬಿಲ್ಲವ ಸಂಘ ಸ್ಥಾಪಕಾಧ್ಯಕ್ಷ ಜನಾರ್ಧನ ಪೂಜಾರಿ ಅಲೆಕ್ಕಾಡಿ,ಜ್ಞಾನ ದೀಪ ಶಿಕ್ಷಣ ಸಂಸ್ಥೆಯ ಸಂಚಾಲಕ ಉಮೇಶ ಮಣಿಕ್ಕಾರ,ಬ್ರಹ್ಮಶ್ರೀ ನಾರಾತಣ ಗುರು ಬಿಲ್ಲವ ಸಂಘದ ಗೌರವಾಧ್ಯಕ್ಷ ಎನ್.ಎಸ್.ಡಿ.ವಿಠಲದಾಸ್,ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಸಾರಕರೆ, ಯುವವಾಹಿನಿ ಅಧ್ಯಕ್ಷ ಸುನಿಲ್ ಪಟ್ಟೆ,ಪ್ರ.ಕಾರ್ಯದರ್ಶಿ ಬಾಲಕೃಷ್ಣ ತಡಗಜೆ ಉಪಸ್ಥಿತರಿದ್ದರು.
ಕು.ಖುಷಿ ಪ್ರಾರ್ಥಿಸಿ,ನವೀನ್ ಸಾರಕರೆ ಸ್ವಾಗತಿಸಿ,ಧರ್ಮಪಾಲ ಶೇಣಿ ಕಾರ್ಯಕ್ರಮ‌ ನಿರೂಪಿಸಿದರು.

ಸನ್ಮಾನ
ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಮೇಶ ಪೂಜಾರಿ ಜಯನಗರ,ಯಕ್ಷಗಾನ ಕಲಾವಿದ ಗುಡ್ಡಪ್ಪ ಸುವರ್ಣ ಪಂಜ,ಉದ್ಯಮಿ ಸಂತೋಷ್ ಕುಮಾರ್ ಅಲೆಕ್ಕಾಡಿ, ಧಾರ್ಮಿಕ ಕ್ಷೇತ್ರದಲ್ಲಿ ಲೋಕೇಶ ಪೂಜಾರಿ ಮಣಿಮಜಲು, ಕ್ರೀಡಾ ಕ್ಷೇತ್ರದಲ್ಲಿ ಕೌಶಿಕ್ ಕಕ್ಕೆಪದವು,ಚಿತ್ರ ಕಲಾವಿದ ಜಿತೇಶ್ ಪೆರುವಾಜೆ, ಸಿವಿಲ್ ಕಾಂಟ್ರಾಕ್ಟರ್ ವಿಶ್ವನಾಥ ಕೊಳಂಬಳ ವರನ್ನು ಶಾಲು ಹೊದಿಸಿ ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಗೌರವಾರ್ಪಣೆ
ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ,ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಶಿವಪ್ರಸಾದ್ ಕೆ.ವಿ, ನಗರ ಪಂಚಾಯತ್ ನಾಮನಿರ್ದೇಶನ ಸದಸ್ಯ ಭಾಸ್ಕರ ಪೂಜಾರಿ ಬಾಜಿನಡ್ಕ ,ಮಹಿಳಾ ಅಟೋ ಚಾಲಕರಾದ ಶ್ರೀಮತಿ ಗೀತಾ ತಡಗಜೆಯವರಿಗೆ ಗೌರವಾರ್ಪಣೆ ನಡೆಯಿತು.


ಬಳಿಕ 2023-24 ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಶೇ 90 ಕ್ಕಿಂತ ಹೆಚ್ವು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.
ಬೆಳಿಗ್ಗೆ ಶ್ರೀ ದುರ್ಗಾ ಮಕ್ಕಳ ಭಜನಾ ಸಂಘ ಪೆರುವಾಜೆ ಇವರಿಂದ ಭಜನಾ ಸಂಕೀರ್ತನೆ ನಡೆಯಿತು.
ಬಳಿಕ ಗುರುಪೂಜೆ ನಡೆಯಿತು.