ಸುಳ್ಯ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ರಜತ ಮಹೋತ್ಸವ ಅಂಗವಾಗಿ ಬೋಧಕೇತರ ಸಿಬ್ಬಂದಿಗಳ ದಿನಾಚರಣೆ

0

ಸುಳ್ಯದ ಸೈಂಟ್ ಜೋಸೆಫ್ ಆಂಗ್ಲಮಾಧ್ಯಮ ಶಾಲೆಯಲ್ಲಿ ರಜತ ಮಹೋತ್ಸವದ ಅಂಗವಾಗಿ ಬೋಧಕೇತರ ಸಿಬ್ಬಂದಿ ವರ್ಗದವರ ದಿನಾಚರಣೆಯನ್ನು ಸೆ.21 ರಂದು ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ರೆ. ಫಾ. ವಿಕ್ಟರ್ ಡಿ’ಸೋಜಾ ಇವರು ವಹಿಸಿದ್ದರು.

ಭೋದಕೇತರ ಸಿಬ್ಬಂದಿಗಳಿಗೆ ಏರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಪೋಷಕ ಸಮಿತಿಯ ವತಿಯಿಂದ ಕಿರು ಕಾಣಿಕೆಯನ್ನು ನೀಡಲಾಯಿತು. ವೇದಿಕೆಯಲ್ಲಿ ಪೋಷಕ ಸಮಿತಿಯ ಉಪಾಧ್ಯಕ್ಷರುಗಳಾದ ಹೇಮನಾಥ ಕೊಡಿಯಾಲ್ ಬೈಲು, ಶಶಿಧರ್. ಎಂ. ಜೆ ಹಾಗೂ ಪ್ರಭೋದ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯಿನಿ ಸಿ I ಮೇರಿ ಸ್ಟೆಲ್ಲಾ, ಚರ್ಚ್ ಪಾಲನಾ ಸಮಿತಿ ಕಾರ್ಯದರ್ಶಿಯಾದ ಜೂಲಿಯಾನ ಕ್ರಾಸ್ತಾ ಇವರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ಶಿಕ್ಷಕ ಕಾರ್ಯದರ್ಶಿಗಳಾದ ಶ್ರೀಮತಿ. ಜ್ಯೋತಿ. ಕೆ ಇವರು ಸ್ವಾಗತಿಸಿ, ಶ್ರೀಮತಿ ದೇವಿಲತಾ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿ ಶ್ರೀಮತಿ. ಸ್ಟೆಪಿಲ್ಲಾ ಇವರು ವಂದನಾರ್ಪಣೆಗೈದರು. ಶಿಕ್ಷಕಿಯ ರಾದ ಶ್ರೀಮತಿ ಹೇಮಾವತಿ. ಬಿ ಹಾಗೂ ಜ್ಯೋತಿ. ಜೆ.ರೈ ಇವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.