ಜಿಲ್ಲಾಮಟ್ಟದ ಯುವ ಸಂಸತ್ತು ಸ್ಪರ್ಧೆ ಮಂಗಳೂರಿನ ಕಾಸಿಯಾ ಪ್ರೌಢಶಾಲೆ ಜಪ್ಪು ಇಲ್ಲಿ ನಡೆಯಿತು ಪ್ರತಿ ತಾಲೂಕಿನಿಂದ ತಲಾ ಐದು ವಿದ್ಯಾರ್ಥಿಗಳಂತೆ ಒಟ್ಟು 35 ವಿದ್ಯಾರ್ಥಿನಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು
ಅಧಿವೇಶನಕ್ಕೆ ಸಭಾಪತಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರ ಆಯ್ಕೆಗೆ ನಡೆದ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ನಮ್ಮ ಸಂಸ್ಥೆಯ ಎಂಟನೇ ತರಗತಿಯ ಅನುಷಾ ಕೆ ಇವರು ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ನಂತರ ಚೀಟಿ ಎತ್ತುವ ಮೂಲಕ ಆಡಳಿತ ಪಕ್ಷದ ಸದಸ್ಯರನ್ನು ಹಾಗೂ ವಿರೋಧ ಪಕ್ಷದ ಸದಸ್ಯರನ್ನು ಆಯ್ಕೆ ಮಾಡಿ ಅವರಿಗೆ ಬೇರೆ ಬೇರೆ ಖಾತೆಗಳನ್ನು ಮತ್ತು ಪ್ರಶ್ನೆಗಳನ್ನು ಹಂಚಲಾಯಿತು. ನಮ್ಮ ಸಂಸ್ಥೆಯ ಪೌರ್ಣಮಿ ಕೆ 9ನೇ ತರಗತಿ ವಿರೋಧ ಪಕ್ಷದ ಸದಸ್ಯರಾಗಿ ಮತ್ತು ಅನನ್ಯ ಕೆ 10ನೇ ತರಗತಿ ಆಡಳಿತ ಪಕ್ಷದ ಶಾಸಕರಾಗಿ ಆಯ್ಕೆಯಾದರು. ಸ್ಥಳದಲ್ಲಿ ನೀಡಿದ ಪ್ರಶ್ನೆ ಹಾಗೂ ವಿಷಯಕ್ಕೆ ಪೂರ್ವ ತಯಾರಿ ನಡೆಸಲು 15 ನಿಮಿಷ ಕಾಲಾವಕಾಶ ನೀಡಲಾಯಿತು .ಯುವ ಸಂಸತ್ತು ಅಧಿವೇಶನ ಸ್ಪರ್ಧೆಯನ್ನು ಮಮತಾ ಐತಾಳ್ ಬಹಳ ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ನಡೆಸಿಕೊಟ್ಟರು. ಭೋಜನದ ನಂತರ ನಡೆದ ಅಧಿವೇಶನದಲ್ಲಿ ಮುಖ್ಯಮಂತ್ರಿ ಆಗಿ ಪಾತ್ರ ನಿರ್ವಹಿಸಿದ ಅನುಷಾ ಇವರು ಗೃಹ ಜ್ಯೋತಿ ಯೋಜನೆ, ಎತ್ತಿನ ಹೊಳೆ ಯೋಜನೆ ಬಗ್ಗೆ ಸಾಂದರ್ಭಿಕವಾಗಿ, ಅತ್ಯುತ್ತಮವಾಗಿ, ವಸ್ತುನಿಷ್ಠವಾಗಿ ನಿರರ್ಗಳವಾಗಿ ಮಾತನಾಡಿ ಪ್ರಥಮ ಸ್ಥಾನವನ್ನು ಪಡೆದುಕೊಂಡರು .ವಿರೋಧ ಪಕ್ಷದ ಸದಸ್ಯರಾಗಿ ಆಯ್ಕೆಯಾದ ಪೌರ್ಣಮಿ ಸರಕಾರಿ ಆಸ್ಪತ್ರೆಗಳ ಲೋಪದೋಷಗಳ ಬಗ್ಗೆ ವಿವರಣಾತ್ಮಕವಾದ ಪ್ರಶ್ನೆ ಕೇಳಿ ಐದನೇ ಸ್ಥಾನಕ್ಕೆ ಆಯ್ಕೆಯಾದರು.ಅನನ್ಯ ಕೆ ಅವರು ತಮ್ಮ ಶಾಸಕ ಸ್ಥಾನವನ್ನು ಪ್ರತಿನಿಧಿಸಿ 6ನೇ ಸ್ಥಾನವನ್ನು ಪಡೆದುಕೊಂಡಿರುತ್ತಾರೆ .ಅನುಷಾ ಕೆ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ