ವಳಲಂಬೆ ಶಾಲಾ ಎಸ್ ಡಿ ಎಂ ಸಿ ರಚನೆ : ಅಧ್ಯಕ್ಷರಾಗಿ ರವೀಶ್ ಕುಮಾರ್ ಎಂ ಪುನರಾಯ್ಕೆ

0

ಗುತ್ತಿಗಾರು ಗ್ರಾಮದ ವಳಲಂಬೆ ಹಿರಿಯ ಪ್ರಾಥಮಿಕ ಶಾಲಾ ಎಸ್ ಡಿ ಎಂ ಸಿ ಸಭೆಯು
ಸೆಪ್ಟೆಂಬರ್ 17ರಂದು ನಡೆಯಿತು .
ಎಸ್‌ ಡಿ ಎಂ ಸಿ ನೂತನ ಅಧ್ಯಕ್ಷರಾಗಿ ರವೀಶ್ ಕುಮಾರ್ ಎಂ ಪುನರ್ ಆಯ್ಕೆಯಾದರು . ಉಪಾಧ್ಯಕ್ಷರಾಗಿ ನಳಿನಾಕ್ಷಿ ಪಿ ಎಸ್ , ಸಮಿತಿಯ ಸದಸ್ಯರುಗಳಾಗಿ ಸತ್ಯವತಿ ,ಶಶಿಕಲಾ ಕೆ , ಮಿಸ್ರಿಯಾ , ನೂತನ್ ಕುಮಾರ್ ಡಿ , ಜಯರಾಮ ಎ , ಚಂದ್ರಕಾಂತ ಎಂ , ಗೋಪಾಲಕೃಷ್ಣ ಎ , ಭವಾನಿ ಶಂಕರ ಎ ಎಲ್ , ದೇವಣ್ಣ ಎನ್ , ಕುಶಾಲಪ್ಪ ಗೌಡ ಎಚ್ , ಜಾನಕಿ , ಭಾಗಿರಥಿ ಕೆ , ರೇಷ್ಮ ಎಚ್ , ರೋಹಿತ್ ಕೆ , ಸದಾನಂದ ಎನ್ ಎಂ , ರೇವತಿ ಆಯ್ಕೆಯಾದರು .
ಪದ ನಿಮಿತ್ತ ಸದಸ್ಯರಾಗಿ ತೃಪ್ತಿ ಕೆ ಪಿ ಪ್ರಭಾರ ಮುಖ್ಯ ಶಿಕ್ಷಕರು,ಲಲಿತ ಆರೋಗ್ಯ ಕಾರ್ಯಕರ್ತೆ, ಚಂದ್ರಾವತಿ ಹೆಚ್ ಅಂಗನವಾಡಿ ಕಾರ್ಯಕರ್ತೆ , ನಾಮ ನಿರ್ದೇಶಿತ ಸದಸ್ಯರಾಗಿ ವೆಂಕಟ್ ವಳಲಂಬೆ ಸ್ಥಳೀಯ ಜನಪ್ರತಿನಿಧಿ , ಪರಶಿವಮೂರ್ತಿ ಕೆ ಎಂ ಸಹ ಶಿಕ್ಷಕ , ಕು . ಪ್ರೇಕ್ಷಾ ಎ ಜಿ ವಿದ್ಯಾರ್ಥಿ ನಾಯಕಿ ಇವರು ಆಯ್ಕೆಯಾದರು .
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ವೆಂಕಟ್ ವಳಲಂಬೆ ,ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಾಲಾ ಸಹ ಶಿಕ್ಷಕರು ಉಪಸ್ಥಿತರಿದ್ದರು .