ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ-ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಗ್ರಾಹಕರಿಗೆ ಅಭಿನಂದನಾ ಕಾರ್ಯಕ್ರಮ

0

ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2023-24 ನೇ ಸಾಲಿನ ಮಹಾಸಭೆಯು ಸೆ.22 ರಂದು ಸಂಘದ ಅಧ್ಯಕ್ಷ ಕೇಶವ ಕರ್ಮಾಜೆ ಯವರ ಅಧ್ಯಕ್ಷತೆಯಲ್ಲಿ ಸಂಘದ ಸಭಾಭವನ ಅಮರ ಸಹಕಾರ ಸೌಧ ಕುಕ್ಕುಜಡ್ಕದಲ್ಲಿ ನಡೆಯಿತು.

ಆರಂಭದಲ್ಲಿ ಗತ ವರ್ಷದಲ್ಲಿ ಅಗಲಿದ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ವಾರ್ಷಿಕ ವರದಿಯನ್ನು ಸಿ.ಇ.ಒ ಮೋಹನ ಕುಮಾರ್ ಪಿ ಮಂಡಿಸಿದರು.

ಸಂಘದಲ್ಲಿ ಪ್ರಸ್ತುತ ವರ್ಷದಲ್ಲಿ 2076 ಎ’ ತರಗತಿಯ ಸದಸ್ಯರನ್ನು ಹೊಂದಿದ್ದು, ಸಿ.ತರಗತಿ 57 ಸದಸ್ಯರಿದ್ದಾರೆ.
ಪಾಲು ಬಂಡವಾಳ ಜುಮ್ಲಾ 4,55,86,680/- ಜಮೆಯಾಗಿದೆ. ವರ್ಷಾಂತ್ಯಕ್ಕೆ ರೂ.18,02,81,964/- ಠೇವಣಾತಿಯಿರುತ್ತದೆ. ವರ್ಷದಲ್ಲಿ ಸದಸ್ಯರಿಗೆ ರೂ.36,13,94,855/- ಸಾಲ ವಿತರಿಸಲಾಗಿದ್ದು ರೂ.33,93,32,078/- ಸಾಲವಸೂಲಾತಿಯಾಗಿದ್ದು ರೂ34,96,95,182/- ಸಾಲಗಳುಹೊರಬಾಕಿಯಿದೆ. ಶೇ.99.03% ಸಾಲ ವಸೂಲಾತಿಯಾಗಿರುತ್ತದೆ.
ಸಂಘದಲ್ಲಿ ವಾರ್ಷಿಕ ವಹಿವಾಟು ರೂ.19.78 ಕೋಟಿಯಾಗಿರುತ್ತದೆ.‌ ಪ್ರಸ್ತುತ ವರ್ಷದಲ್ಲಿ ರೂ.8,39,059/- ಆಗಿರುತ್ತದೆ.

ಈ ಸಂದರ್ಭದಲ್ಲಿ
ಪಿ.ಯುಸಿ.ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.90% ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ಪುರಸ್ಕಾರ ನೀಡಿಅಭಿನಂದಿಸಲಾಯಿತು. ಸಂಘದ ವ್ಯಾಪಾರ ಮಳಿಗೆಯಲ್ಲಿ ಅತೀ ಹೆಚ್ಚು ವ್ಯವಹಾರ ಮಾಡಿದ ಗ್ರಾಹಕರನ್ನು ಅಭಿನಂದಿಸಲಾಯಿತು. ಅತೀ ಹೆಚ್ಚು ಅಡಿಕೆಯನ್ನು ಕ್ಯಾಂಪ್ಕೋ ಸಂಸ್ಥೆಗೆ ಸಂಘದ ಮೂಲಕ ಜಮೆ ಮಾಡಿದ ಸದಸ್ಯರನ್ನು ಗೌರವಿಸಲಾಯಿತು.

ಸಮಗ್ರ ಬೈಲಾ ತಿದ್ದುಪಡಿ ಯಲ್ಲಿ ಸಂಘಕ್ಕೆ ಅನೂಕೂಲಕರವಾಗಿರುವ ವ್ಯವಸ್ಥೆಗಳನ್ನು ಅಳವಡಿಸಿಕೊಂಡು ತಿದ್ದು ಪಡಿ ಮಾಡಿಕೊಳ್ಳಬೇಕು. ಕೇಂದ್ರ ಸರಕಾರದಿಂದ ಗ್ರಾಮೀಣ ಅಭಿವೃದ್ಧಿಗೆ ಸಾವಿರಾರು ಕೋಟಿ ಇರಿಸುತ್ತಾರೆ.
ಅದನ್ನು ಬೈಲಾದಲ್ಲಿ ಸೇರಿಸಿಕೊಂಡು ಮುಂದುವರಿಯಬೇಕು‌. ಸಂಘಕ್ಕೆ ಸೋಲಾರ್ ಅಳವಡಿಸಿದ್ದರೆ ವಿದ್ಯುತ್ ಬಿಲ್ ಉಳಿಕೆ ಮಾಡಬಹುದಿತ್ತು. ಬಜೆಟ್ ಮಾಡುವ ಸಮಯದಲ್ಲಿ ಸಮರ್ಪಕವಾಗಿ ಮಾಡಿಕೊಳ್ಳಬೇಕಿತ್ತು. ಕೆಲವೊಂದು ಖಾತೆಗೆ ಹೆಚ್ಚುವರಿ ಬಜೆಟ್ ಇರಿಸುವ ಬದಲಾಗಿ ಲಾಭಾಂಶದಲ್ಲಿ ತೋರಿಸಬೇಕಿತ್ತು. 6 ಲಕ್ಷ ಬದಲಾಗಿ 15 ಲಕ್ಷ ಉಳಿಕೆ ಮಾಡಿ ತೋರಿಸಬೇಕು. ಮುಂದಿನ ಮಹಾಸಭೆಯಲ್ಲಿ ಸದಸ್ಯರಿಗೆ ಡಿವಿಡೆಂಡ್ ಕೊಡುವುದಾಗಿ ಘೋಷಿಸಬೇಕು.
7 ಮಂದಿ ಖಾಯಂ ಸಿಬ್ಬಂದಿ ಇರುವುದು. 3 ವರ್ಷ ಕೆಲಸ ನಿರ್ವಹಿಸಿದ ಅರೆಕಾಲಿಕ ದಿನಗೂಲಿ ಸಿಬ್ಬಂದಿಯವರನ್ನು ಇರಿಸಿಕೊಳ್ಳಬಾರದು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಸಂಘಕ್ಕೆ ಬರಬೇಕಾದ‌ 7.5 ಲಕ್ಷವನ್ನು ತರಿಸಿಕೊಳ್ಳಬೇಕು.ರೂ.15 ಲಕ್ಷ ಕೊಡುವುದಾದರೆ ರಾಜಿಯಲ್ಲಿ ಇತ್ಯರ್ಥ ಮಾಡಕೊಳ್ಳಿ ಇಲ್ಲವಾದಲ್ಲಿ ಕೋರ್ಟಿನ ಮೂಲಕ ಹೋರಾಟ ಮಾಡಿ ನಮ್ಮ ಸಂಸ್ಥೆಗೆ ಬರಬೇಕಾದ ಹಣವನ್ನು ತರಿಸಿಕೊಳ್ಳಬೇಕು ಎಂದು ಎಂ.ಜಿ.ಸತ್ಯನಾರಾಯಣ ರವರು ಸೂಚನೆ ನೀಡಿದರು.

ಈ ಬಗ್ಗೆ ಮಹಾಸಭೆಯಲ್ಲಿ ನಿರ್ಣಯ ಮಾಡಬೇಕು. ಕೋರ್ಟಿಗೆ ಹೋಗಬೇಕಾ ಅಥವಾ ರಾಜಿ ಸಂಧಾನ ಮಾಡಬೇಕೆ ?
ಲಾಭಾಂಶ ಕಡಿಮೆಯಾಗಿದೆ ಮುಂದಿನ ವರ್ಷ ಹೆಚ್ಚಿಸುವಲ್ಲಿ ಪ್ರಯತ್ನ ಪಡುತ್ತೇವೆ. ಕಾಂಪ್ಲೆಕ್ಸ್ ನಲ್ಲಿ ಬಾಡಿಗೆ ಕೊಠಡಿ ನಿರ್ವಹಣೆಯ ದೃಷ್ಟಿಯಿಂದ ಹೆಚ್ಚಿನ ಖರ್ಚಾಗಿದೆ. ಮಾರಾಟ ಮಳಿಗೆಯಲ್ಲಿ ಸದಸ್ಯರು ವ್ಯವಹರಿಸಿ ಸಂಘದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಅಧ್ಯಕ್ಷ ಕೇಶವ ಕರ್ಮಾಜೆ ವಿನಂತಿಸಿದರು.
ಹಿರಿಯ ಸದಸ್ಯರು ಉಲ್ಲೇಖಿಸಿದಂತೆ ಡಿ‌ಸಿ.ಸಿ.ಬ್ಯಾಂಕಿನಿಂದ ಜಮೆಯಾಗಬೇಕಾದ ಮೊಬಲಗು 7.5 ಲಕ್ಷ ಹಿಂದಿನ ಆಡಳಿತ ಮಂಡಳಿಯ ಸಂದರ್ಭದಲ್ಲಿ ಕೋರ್ಟಿಗೆ ಹೋಗಲಾಗಿದೆ. ರಾಜಿ ಸಂಧಾನ ಅಥವಾ ‌ಕೋರ್ಟ್ ಮೂಲಕ ಹೋರಾಟ ಮಾಡುವುದರೊಂದಿಗೆ ಸಂಘಕ್ಕೆ ತರಿಸಿಕೊಡುವ ವ್ಯವಸ್ಥೆ ಮಾಡಬೇಕು. ಬೈಲಾ ತಿದ್ದುಪಡಿ ಪ್ರತಿಯನ್ನು ಸದಸ್ಯರಿಗೆ ನೀಡಬೇಕು ಎಂದು ರಾಧಾಕೃಷ್ಣ ಬೆಳ್ಳೂರು ತಿಳಿಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಪ್ರವೀಣ್ ಎಸ್ ರಾವ್, ನಿರ್ದೇಶಕರಾದ ಅರುಣ್ ನಾಯರ್ ಕಲ್ಲು, ರಾಧಾಕೃಷ್ಣ ಬೊಳ್ಳೂರು, ರಾಘವೇಂದ್ರ ಪಿ, ಉಮೇಶ್ ಚಿಲ್ಪಾರು, ನಿರಂಜನ ಕಾನಡ್ಕ, ರಘುರಾಮ, ಕೃಷ್ಣ ನಾಯ್ಕ, ಲತೇಶ್ವರಿ ಎಂ.ಎಸ್, ವೀಣಾ ಎಂ.ಡಿ,ಕುಮಾರ. ಬೆಳ್ಚಪ್ಪಾಡ, ಅರುಣ್ ಕುಮಾರ್ ಪರ್ಮಲೆ ಉಪಸ್ಥಿತರಿದ್ದರು. ಸಂಘದ ಸದಸ್ಯರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದರು. ಸಿಬ್ಬಂದಿ ವರ್ಗದವರು ಸಹಕರಿಸಿದರು.