ಶ್ರೀಮತಿ ಕುಸುಮಾವತಿ ಶಿಡ್ಲುಕಜೆ ಮೂರ್ಜೆ ನಿಧನ

0

ಅಮರಮುಡ್ನೂರು ಗ್ರಾಮದ ಶಿಡ್ಲುಕಜೆ ದಿ.ವೆಂಕಟ್ರಮಣ ಗೌಡರ ಪತ್ನಿ ಶ್ರೀಮತಿ ಕುಸುಮಾವತಿ ಶಿಡ್ಲುಕಜೆ ಮೂರ್ಜೆ ಯವರು ಅಲ್ಪ ಕಾಲದ ಅಸೌಖ್ಯದಿಂದ ತನ್ನ ಸ್ವಗೃಹದಲ್ಲಿ ಸೆ.26 ರಂದು ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ಅಮರಮುಡ್ನೂರು ಪಂಚಾಯತ್ ಸಿಬ್ಬಂದಿ ಹರೀಶ್ ಶಿಡ್ಲುಕಜೆ, ಸತೀಶ್ ಸಿಡ್ಲುಕಜೆ, ಓರ್ವ ಪುತ್ರಿ ಶ್ರೀಮತಿ ಪ್ರಮೀಳಾ ರಾಧಾಕೃಷ್ಣ ಪರ್ಪುಂಜ, ಸೊಸೆಯಂದಿರಾದ ಶ್ರೀಮತಿ ಶಶಿಕಲಾ, ಶ್ರೀಮತಿ ಹರಿಣಾಕ್ಷಿ ಮತ್ತು ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು, ಬಂಧುಗಳನ್ನು ಅಗಲಿದ್ದಾರೆ.