70 ರ ಹೊಸ್ತಿಲಲ್ಲಿ ಸಿಎಂಎಸ್ ಅಡಿಕೆ ಮತ್ತು ಕಾಡುತ್ಪತ್ತಿ ಖರೀದಿ ಮಳಿಗೆನೂತನ ಖರೀದಿ ಕೇಂದ್ರ ಅಲೆಟ್ಟಿ ರಸ್ತೆಯಲ್ಲಿ ಸ್ಥಳಾಂತರಗೊಂಡು ಶುಭಾರಂಭ

0

ಸುಳ್ಯದಲ್ಲಿ ಕಳೆದ 70 ವರ್ಷಗಳ ದಿ|ಚೆಂಗಳ ಮೊಯ್ದುಕುಂಞಿ ಸುಳ್ಯ ರವರು ಆರಂಭಿಸಿದ ಅಡಿಕೆ ಮತ್ತು ಕಾಡುತ್ಪತ್ತಿ ವ್ಯಾಪಾರ ಉದ್ಯಮ ಇದೀಗ ಅವರು ಮಕ್ಕಳು ಸುಳ್ಯದಲ್ಲಿ ಮುನ್ನಡೆಸುತ್ತಿದ್ದಾರೆ.
ಸಿಎಂಎಸ್ ರವರ ಓರ್ವ ಪುತ್ರ ಗಾಂಧಿನಗರ ಮಸೀದಿ ಮುಂಭಾಗದಲ್ಲಿ ಅಡಿಕೆ ವ್ಯಾಪಾರ ಮಾಡುತ್ತಿದ್ದಾರೆ ಇನ್ನೋರ್ವ ಪುತ್ರ ಅಬ್ದುಲ್ಲಾರವರು ಕಳೆದ ‌ನಲುವತ್ತು ವರ್ಷಗಳಿಂದ ಸುಳ್ಯ ಗಾಂಧಿನಗರದಲ್ಲಿ ಅಡಿಕೆ ಮತ್ತು ಕಾಡುತ್ಪತ್ತಿ ಖರೀದಿ ಮತ್ತು ಮಾರಟ ಉದ್ಯಮವನ್ನು ನಡೆಸುತ್ತಿದ್ದಾರೆ.


ಈಗ ಅವರ ವ್ಯಾಪಾರ ಕೇಂದ್ರವು ಸ್ಥಳಾಂತರಗೊಂಡು ಸುಳ್ಯ ಗಾಂಧಿನಗರ ಅಲೆಟ್ಟಿ ರಸ್ತೆಯಲ್ಲಿರುವ ತಾಹಿರ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿದೆ.
ಸೆ.27ರಂದು ಸ್ಥಳಾಂತರಗೊಂಡು ಮಳಿಗೆಯನ್ನು ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ ಸುಧಾಕರ ರೈ,ಗಾಂಧಿನಗರ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ಲಾ ರವರ ಸಹೋದರ ಮಹಮ್ಮದ್ ಹಾಜಿ ಕೆಎಂಎಸ್ ಉದ್ಘಾಟಿಸಿದರು.


ಸುಳ್ಯದಲ್ಲಿ 70 ವರ್ಷಗಳಿಂದ ನಡೆಸುತ್ತಿರುವ ಉದ್ಯಮ ತಮ್ಮ ತಂದೆಯವರ ಕಾಲದಿಂದ ಆರಂಭಿಸಿದ ಉದ್ಯಮ ಇಷ್ಟು ವರ್ಷಗಳ ಕಾಲ ನೆಲೆನಿಂತು ಎತ್ತರಕ್ಕೆ ಬೆಳೆಯಲು ಇವರ ವಿಶ್ವಾರ್ಹ ಸೇವೆ ಕಾರಣ ಎಂದು ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ ಹೇಳಿದರು.
ಸುಳ್ಯ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ,ಹಾಜಿ ಕೆ ಎಂ ಮುಸ್ತಫಾ ಶುಭ ಹಾರೈಸಿದರು.
ಎ ಪಿ ಎಂ ಸಿ ಮಾಜಿ ನಿರ್ದೇಶಕ ಆದಂ ಹಾಜಿ ಕಮ್ಮಾಡಿ ಉದ್ಘಾಟನಾ ಸಮಾರಂಭ ಅಧ್ಯಕ್ಷತೆ ವಹಿಸಿದರು.
ಅನ್ಸಾರಿಯಾ ಅಧ್ಯಕ್ಷ ಹಾಜಿ ಅಬ್ದುಲ್‌ ಮಜೀದ್ ಜನತಾ, ಅನ್ಸಾರ್ ಮಾಜಿ ಅಧ್ಯಕ್ಷ ಹಾಜಿ ಅಬ್ದುಲ್‌ ಶುಕೂರ್,ಹಮೀದ್ ಜನತಾ,ಎಸ್ ಪಿ ಅಬೂಭಕ್ಕರ್,ಅಬ್ದುಲ್‌ ರಹಿಮಾನ್ ಸಂಗಂ,ಕೆ.ಬಿ ಮಜೀದ್,ಸತ್ತಾರ್ ಮಹಮ್ಮದಿಯಾ,ಮುಸ್ತಫಾ ಮಹಮ್ಮದಿಯಾ,ಅಬ್ದುಲ್‌ ರಹಿಮಾನ್ ಶಾಲಿಮಾರ್,ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವರ್ತಕರ ಸಂಘದ ಸದಸ್ಯತ್ವ ಪತ್ರ ನೀಡಿ ಸಂಸ್ಥೆ ಮಾಲಕರನ್ನು ಗೌರವಿಸಲಾಯಿತು.
ಸಂಸ್ಥೆಯ ಮಾಲಕರನ್ನು ಮಲೆನಾಡು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ರಿಯಾಜ್ ಕಟ್ಟೆಕ್ಕಾರ್ ರವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿಯ ಮುದ್ದು ಕೃಷ್ಣ ಹಾಗೂ ಕಾರ್ಯದರ್ಶಿ ರವಿಂದ್ರ ರವರು ಉಪಸ್ಥಿತರಿದ್ದರು.
ಅಬ್ದುಲ್ಲಾ ರವರವ ಪುತ್ರರಾದ ಸಿನಾನ್ ಮತ್ತು ಸಿಬಾದ್ ಸ್ವಾಗತಿಸಿ ಪತ್ರಕರ್ತ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.
ನೌಶಾದ್ ಕೆರೆಮೂಲೆ ವಂದಿಸಿದರು.