ಎಣ್ಮೂರು-ನಿಂತಿಕಲ್ಲು ತೀಯಾ ಸಮಾಜ ಸೇವಾ ಸಮಿತಿಯಿಂದ ತೀಯಾ ಓಣಂ ಸಂಭ್ರಮ – 2024

0

ಎಣ್ಮೂರು – ನಿಂತಿಕಲ್ಲು ತೀಯಾ ಸಮಾಜ ಸೇವಾ ಸಮಿತಿ, ನಿಂತಿಕಲ್ಲು ಇದರ ವತಿಯಿಂದ ಓಣಂ ಆಚರಣೆಯ ಪ್ರಯುಕ್ತ ಸೆ.22 ರಂದು ತೀಯಾ ಓಣಂ ಸಂಭ್ರಮ – 2024 ಕಾರ್ಯಕ್ರಮವನ್ನು ಎಣ್ಮೂರಿನ ಶ್ರೀರಾಮ ಕಾಂಪ್ಲೆಕ್ಸ್ ಸಂಭಾಂಗಣದಲ್ಲಿ ಆಯೋಜಿಸಲಾಯಿತು.


ಸಮುದಾಯದ ಹಿರಿಯರು ಒಟ್ಟಾಗಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬಳಿಕ ಸಮುದಾಯದ ಮಕ್ಕಳಿಗೆ ಹಾಗೂ ಪುರುಷ – ಮಹಿಳೆಯರಿಗೆ ವಿವಿಧ ಮನೋರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಬಳಿಕ ಸಭಾ ಕಾರ್ಯಕ್ರಮ ನಡೆಯಿತು.

ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಕಲ್ಲೇರಿಯವರು ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೋಳ್ನಾಡು ಭಗವತಿ ಕ್ಷೇತ್ರದ ಮೊಕ್ತೇಸರರಾದ ಕೃಷ್ಣ ಉಚ್ಚಿಲ, ಕ್ಷೇತ್ರದ ಆಡಳಿತ ಮಂಡಳಿಯ ಕೋಶಾಧಿಕಾರಿ ಚಂದ್ರಶೇಖರ ಮಾಡಿಯಾಳ ಹಾಗೂ ಪುತ್ತೂರು ತೀಯಾ ಸಮಾಜ ಸೇವಾ ಸಮಿತಿಯ ಅಧ್ಯಕ್ಷರಾದ ಗೋಪಾಲಕೃಷ್ಣ ಇವರು ಉಪಸ್ಥಿತರಿದ್ದರು.

ಸಭೆಯಲ್ಲಿ ಶ್ರೀ ಕೃಷ್ಣ ಉಚ್ಚಿಲ ಇವರಿಗೆ ಗೌರವಾರ್ಪಣೆಯನ್ನು ಸಲ್ಲಿಸಲಾಯಿತು. ಬಳಿಕ ಮಾತನಾಡಿ ತಮ್ಮ ಜೀವನಾನುಭವವನ್ನು ಹಂಚಿಕೊಂಡರು. ಬಳಿಕ ವಿಜ್ಞಾನ ಪದವಿ ಪರೀಕ್ಷೆಯಲ್ಲಿ ವಿಶೇಷ ಸಾಧನೆ ತೋರಿದ ಕು. ಜ್ಯೋತಿ ಪಾಜಪಳ್ಳ ಇವರನ್ನು ಸನ್ಮಾನಿಸಲಾಯಿತು. ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾದ ವಿದ್ಯಾಥಿ೯ಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ವಿವಿಧ ಮನೋರಂಜನಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಆಕರ್ಷಕ ಪೂಕಳಂ ಎಲ್ಲರ ಗಮನ ಸೆಳೆಯಿತು. ಸಮುದಾಯದ ಮಕ್ಕಳು ಹಾಗೂ ಮಹಿಳೆಯರು ಪ್ರದರ್ಶಿಸಿದ ತಿರುವಾದಿರ ಸಾಂಪ್ರದಾಯಿಕ ನೃತ್ಯ ಹಾಗೂ ಓಣಂ ನೃತ್ಯಗಳು ಕಾರ್ಯಕ್ರಮದ ಮೆರುಗು ಹೆಚ್ಚಿಸಿತು. ಯೋಗ ಪ್ರದರ್ಶನ ನಡೆಸಲಾಯಿತು. ಕುಮಾರಿ ದಿಶಾ ದೇವತಾ ಪ್ರಾರ್ಥನೆ ಗೈದರು. ಸ್ಥಾಪಕಾಧ್ಯಕ್ಷರಾದ ಲೋಕೇಶ್ ಬೆಳ್ಳಿಗೆ ಯವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಮಹಿಳಾ ಸಮಿತಿಯ ಉಪಾಧ್ಯಕ್ಷರಾದ ಶ್ರೀಮತಿ ಸುವರ್ಣ ಚಂದ್ರಿಕಾ ರವರು ವಂದಿಸಿದರು. ಸಮಿತಿಯ ಕಾರ್ಯದರ್ಶಿ ಸುಹಾಸ್ ಅಲೆಕ್ಕಾಡಿ ಹಾಗೂ ಕುಮಾರಿ ಜ್ಯೋತಿ ಪಾಜಪಳ್ಳ ರವರು ಕಾರ್ಯಕ್ರಮ ನಿರೂಪಿಸಿದರು. ಎಲ್ಲರೂ ವಿವಿಧ ಬಗೆಯ 21 ಖಾದ್ಯಗಳ ಓಣಂ ಸದ್ಯ ಸವಿದರು.