ಮರ್ಕಂಜ : ನೀರು ಖಾಲಿಯಾಗುತ್ತಿದ್ದಂತೆ ಒಳಭಾಗದಲ್ಲಿ‌ ಕುಸಿಯುತ್ತಿರುವ ಬಾವಿ

0

ಮರ್ಕಂಜದ ಮಿತ್ತಡ್ಕ ದಲ್ಲಿ‌ ಮಹಿಳೆ ಕಾಣೆಯಾದ ಹಿನ್ನೆಲೆಯಲ್ಲಿ ಅನುಮಾನದಿಂದ ಬಾವಿಯಲ್ಲಿ ಹುಡುಕುವ ಪ್ರಯತ್ನ ಇಂದಿನಿಂದ ಆರಂಭಗೊಂಡಿದೆ. ಬಾವಿಯ ನೀರು ಖಾಲಿಯಾಗುತ್ತಿದ್ದಂತೆ ಬಾವಿಯ ಒಳಭಾಗ ಕುಸಿಯುತ್ತಿದೆ.

ನಾಪತ್ತೆಯಾದ ಮಿತ್ತಡ್ಕದ ಶೋಭಾಲತಾ ಎಂಬವರನ್ನು ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅವರ ಮನೆಯ ಬಾವಿಯನ್ನು ಅಗ್ನಿಶಾಮಕ ದಳದ ಕೊಕ್ಕೆ ಹಾಕಿ ಪರಿಶೀಲಿಸಿದ್ದರು.

ಅಲ್ಲದೇ ಸ್ಥಳೀಯರು ಹಾಗೂ ವಿಪತ್ತು ನಿರ್ವಹಣಾ ಘಟಕದವರು ಸೇರಿ‌ ನೀರು ಖಾಲಿ‌ ಮಾಡುವ ಪ್ರಯತ್ನ ಮಾಡಿದ್ದರು.

ಆದರೆ ಒಳಭಾಗ ಕುಸಿಯಲು ಆರಂಭವಾದ ಕಾರಣ ಕಾರ್ಯಚರಣೆ ಕೈ ಬಿಟ್ಟಿದ್ದರು. ಇದೀಗ ಪೋಲೀಸರ ಸೂಚನೆಯಂತೆ ಅಗ್ನಿಶಾಮಕ ದಳದವರು, ಸ್ಥಳೀಯರು ಸೇರಿ ಬಾವಿಯ ನೀರು‌ ಖಾಲಿ ಮಾಡುತ್ತಿದ್ದಾರೆ.‌ ನೀರು ಖಾಲಿಯಾಗುತ್ತದ್ದಂತೆ ಒಳಭಾಗದಲ್ಲಿ ಬಾವಿಯ ಸುತ್ತ ಕುಸಿತ ಉಂಟಾಗುತ್ತಿದೆ ಎಂದು ತಿಳಿದು ಬಂದಿದೆ.