ದೇವಚಳ್ಳ : ನಡೆಯಲು ಅಶಕ್ತರಾಗಿದ್ದರೂ ವ್ಯಕ್ತಿ‌ ನಿಗೂಢ ಕಾಣೆ

0

ದೈಹಿಕವಾಗಿ ಅಶಕ್ತರಾಗಿದ್ದ ವ್ಯಕ್ತಿಯೊಬ್ಬರು ನಿಗೂಢವಾಗಿ ಕಾಣೆಯಾಗಿ 17 ದಿನದರೂ ಪತ್ತೆಯಾಗದ ಘಟನೆ ನಡೆದಿದೆ.

ದೇವಚಳ್ಳ ಗ್ರಾಮದ ಸೇವಾಜೆಯ ಬೆಳ್ಯಪ್ಪ ಗೌಡರೇ ನಿಗೂಢವಾಗಿ ಕಾಣೆಯಾದ ವ್ಯಕ್ತಿ.

ಸುಮಾರು 70 ವರ್ಷ ಪ್ರಾಯದ ಬೆಳ್ಯಪ್ಪ ಗೌಡರು ದೈಹಿಕವಾಗಿ ಅಸಕ್ತಗೊ‌ಂಡಿದ್ದರು. ಅವರಿಗೆ ಸರಿಯಾಗಿ ನಡೆದುಕೊಂಡು ಹೋಗಲು ಸಾಧ್ಯವಾಗುತ್ತಿರಲಿಲ್ಲ. ಹಾಗಿದ್ದರೂ ಸೆ.9ರಂದು ಮಧ್ಯಾಹ್ನ 3 ಗಂಟೆಗೆ ಕಾಣೆಯಾಗಿದ್ದರು.

ಹುಡಿಕಾಡಿದರೂ ಪತ್ತೆ ಇಲ್ಲ :
ಬೆಳ್ಯಪ್ಪ ಗೌಡರು ಕಾಣೆಯಾದ ಬಳಿಕ ನಿರಂತರ ಹುಡುಕಾಟ ನಡೆಸಲಾಗಿದೆ. ಮಧ್ಯಾಹ್ನ 3 ಗಂಟೆಯ‌ ವೇಳೆಗೆ ಕಾಣೆಯಾಗಿದ್ದರೂ ಇವರನ್ನು ಯಾರೊಬ್ಬರು ನೋಡಿಲ್ಲ. ಕಾಣೆಯಾದ ಬಗ್ಗೆ ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಸೆ.13ರಂದು ಸುಮಾರು ನೂರಕ್ಕೂ ಹೆಚ್ಚು ಮಂದಿ ಹುಡುಕಾಟ ನಡೆಸಿದ್ದಾರೆ. ಅವರು ಮನೆಯ ಬಳಿಯ ಹೊಳೆಯಲ್ಲಿ ಬಿದ್ದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮುಳಗು ತಜ್ಞರ ಮೂಲಕ‌ ಹುಡುಕಿದ್ದಾರೆ. ಆದರೆ ಅಲ್ಲೂ ಪತ್ತೆಯಾಗಿರಲಿಲ್ಲ.

ಅರ್ಧ ಕೈ ಅಂಗಿ ಮತ್ತು ಬೈರಾಸ್ ಉಟ್ಟುಕೊಂಡಿದ್ದರು. ಗೂನು ಬೆನ್ನಿನಿಂದಾಗಿ ಕೆಲಸಮಯದಿಂದ ಬಗ್ಗಿ ನಡೆಯುತ್ತಿದ್ದರು. ಹಾಗಿದ್ದರೂ ಅವರ ನಾಪತ್ತೆ ಪ್ರಕರಣ ಇದೀಗ ನಿಗೂಢತೆಯಿಂದ ಕೂಡಿದೆ.