ಬಾಲಕನಿಗೆ ಬೀದಿ ನಾಯಿ ಕಚ್ಚಿ ಗಾಯ

0

ನಾಯಿಗಳನ್ನು ಕಟ್ಟಿ ಹಾಕುವಂತೆ ಬಾಲಕನ ಮನವಿ

ನಗರ ಪಂಚಾಯತ್ ಯಾಕಿಷ್ಟು‌ ನಿರ್ಲಕ್ಷ್ಯ : ಪಂಚಾಯತ್ ಸದಸ್ಯ ಅಸಮಾಧಾನ

ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನಿಗೆ ಬೀದಿ ನಾಯಿ ಕಡಿದ ಪರಿಣಾಮ ಯುವಕ ಗಾಯಗೊಂಡಿದ್ದು, ಆ ಬಾಲಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ನಾಯಿಗಳನ್ನು‌ ಬೀದಿಯಲ್ಲಿ ಬಿಡದೆ ಕಟ್ಟಿ ಹಾಕುವಂತೆ ಬಾಲಕ ಮನವಿ ಮಾಡಿದರೆ, ಬೀದಿ ನಾಯಿಗಳ ಹೆಚ್ಚಳದ ಕುರಿತು ನಗರ ಪಂಚಾಯತ್ ಗೆ ಮಾಹಿತಿ ಕೊಟ್ಟರು ಅಧಿಕಾರಿಗಳು ಯಾಕೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕಾರ್ ಪಂಚಾಯತ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇರ್ಪಳದಲ್ಲಿ ಲೋಕೇಶ ಎಂಬವರ ಪುತ್ರ ರೇವಂತ್ ಎಂಬ ಬಾಲಕನಿಗೆ ನಾಯಿಯೊಂದು ಕಚ್ಚಿ ಕಾಲಿಗೆ ಏಟಾಯಿತು. ಆ ಯುವಕನನ್ನು ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು.

ಘಟನೆಯ ಕುರಿತು ವಿವರಿಸಿರುವ ಬಾಲಕ ಆಟವಾಡುವಾಗ ನಾಯಿಯೊಂದು ಕಚ್ಚಿತು. ಶಾಲೆಗೆ ರಜೆ ಸಿಕ್ಕಿದ ಈ ದಿನದಲ್ಲಿ ನಾಯಿಗಳನ್ನು ಅವರವರು ಕಟ್ಟಿ ಹಾಕಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ನ.ಪಂ. ಸದಸ್ಯ ರಿಯಾಜ್ ಕಟ್ಟೆಕಾರ್ ಪ್ರತಿಕ್ರಿಯೆ ನೀಡಿ, ಬೀದಿ ನಾಯಿಗಳ ಹಾವಳಿ ಕುರಿತು ಕೆಲ ದಿನಗಳ ಹಿಂದೆ ಪಂಚಾಯತ್ ಗೆ ಮಾಹಿತಿ ನೀಡಿದ್ದೇವೆ. ಆದರೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಅವರು ಯಾಕೆ ಹೀಗೆ ಮಾಡುತ್ತಾರೆನ್ನುವುದನ್ನು ಪ್ರಶ್ನಿಸುತ್ತೇನೆ ಎಂದು ಹೇಳಿದ್ದಾರೆ.