ಐವರ್ನಾಡಿನಲ್ಲಿ 20ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವ

0

ಯುವಶಕ್ತಿ ಸಂಘ ಐವರ್ನಾಡು,ಸಾರ್ವಜನಿಕರ ಸಹಕಾರದೊಂದಿಗೆ 20 ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವವು ಅ.05 ಮತ್ತು ಅ.06 ರಂದು ಪುತ್ತಿಲ ಗಿರೀಶ್ ಅಸ್ರಣ್ಣರವರ ನೇತೃತ್ವದಲ್ಲಿ ಐವರ್ನಾಡು ಸ.ಹಿ.ಪ್ರಾ.ಶಾಲಾ ಶ್ರೀ ಮಾತಾಜಿ ಸಭಾಭವನದ “ಮಡ್ತಿಲ ಪುರುಷೋತ್ತಮ ಗೌಡ” ಸ್ಮಾರಕ ರಂಗಮಂದಿರದಲ್ಲಿ ವಿವಿಧ ಧಾರ್ಮಿಕ ,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.


ರಾತ್ರಿ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಬಳಿಕ ಮಾತನಾಡಿ
ಐವರ್ನಾಡಿನಲ್ಲಿ ಯುವಶಕ್ತಿ ಸಂಘದ ವತಿಯಿಂದ 20 ವರ್ಷಗಳಿಂದ ಶ್ರದ್ಧಾ, ಭಕ್ತಿಯಿಂದ ನಡೆದುಕೊಂಡು ಬರುತ್ತಿರುವ ಶಾರದೋತ್ಸವ ಕಾರ್ಯಕ್ರಮದಿಂದ ವಿದ್ಯೆಗೆ ಅಧಿದೇವತೆಯಾದ ಶ್ರೀ ಶಾರದಾ ದೇವಿಯನ್ನು ಪೂಜಿಸಲು ಎಲ್ಲರಿಗೂ ಅವಕಾಶವಾಗಿದೆ.


ಮಕ್ಕಳಿಗೆ ವಿದ್ಯೆಯ ಜೊತೆ ,ಸಂಸ್ಕಾರವನ್ನೂ ನೀಡುವ ಮುಖಾಂತರ ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನಾಗಿ ಮಾಡಲು ಸಾಧ್ಯ ಎಂದು ಹೇಳಿದರು.


ಯುವಶಕ್ತಿ ಸಂಘದ ಗೌರವಾಧ್ಯಕ್ಷ ದಿನೇಶ್ ಮಡ್ತಿಲರವರು ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ 20 ವರ್ಷಗಳಿಂದ ಯುವಶಕ್ತಿ ಸಂಘದ ವತಿಯಿಂದ ಸಾರ್ವಜನಿಕರ ಸಹಕಾರದೊಂದಿಗೆ ಯಶಸ್ವಿಯಾಗಿ ಶ್ರೀ ಶಾರದೋತ್ಸವ ಕಾರ್ಯಕ್ರಮ ನಡೆಯುತ್ತಾ ಬಂದಿದೆ.


ಕಾರ್ಯಕ್ರಮವು ಎಲ್ಲರ ಸಹಕಾರದೊಂದಿಗೆ ವರ್ಷದಿಂದ ವರ್ಷ ಕಾರ್ಯಕ್ರಮ ವಿಜೃಂಭಿಸುತ್ತಿದೆ. ಮುಂದೆಯೂ ಎಲ್ಲರ ಸಹಕಾರ ನೀಡಬೇಕು ಎಂದು ಹೇಳಿದರು.


ಸನ್ಮಾನ
ಎಂ.ಡಿ.ಎಸ್.ನಲ್ಲಿ ಚಿನ್ನದ ಪದಕ ಪಡೆದ ಡಾ.ಸಂದೀಪ್ ಬಿ.ಎಸ್.ಬಿರ್ಮುಕಜೆ ಮತ್ತು ಐವರ್ನಾಡು ಗ್ರಾಮ ಪಂಚಾಯತ್ ನಿವೃತ್ತ ಉದ್ಯೋಗಿ ಪುರುತ್ತಮ ನಿಡುಬೆ ಪೂಜಾರಿಮನೆ ಇವರನ್ನು ಶಾಲು ಹೊದಿಸಿ,ಫಲ,ಪುಷ್ಪ,ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.


ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.


ವೇದಿಕೆಯಲ್ಲಿ ಕೆವಿಜಿ ಐಟಿಐ ಕಚೇರಿ ಅಧೀಕ್ಷಕರಾದ ಭವಾನಿಶಂಕರ ಅಡ್ತಲೆ, ಐವರ್ನಾಡು ಸ.ಹಿ.ಪ್ರಾ.ಶಾಲಾ ಶಿಕ್ಷಕ ಭವಾನಿಶಂಕರ ಕೋಲ್ಚಾರು, ಯುವಶಕ್ತಿ ಸಂಘದ ಅಧ್ಯಕ್ಷ ನವೀನ್ ಬಾಂಜಿಕೋಡಿ,ಕಾರ್ಯದರ್ಶಿ ವಿನಯ ಉದ್ದಂಪಾಡಿ ಉಪಸ್ಥಿತರಿದ್ದರು.


ಮೇಘನ ಕಣಿಲೆಗುಂಡಿ ಮತ್ತು ಹಿಮಾಲಿ ಮಡ್ತಿಲ ಪ್ರಾರ್ಥಿಸಿ,ಜುನೈದ್ ನಿಡುಬೆ ಕಾರ್ಯಕ್ರಮ ನಿರೂಪಿಸಿ,ನವೀನ್ ಬಾಂಜಿಕೋಡಿ ವಂದಿಸಿದರು.

ಬೆಳಿಗ್ಗೆ ಗಣಹೋಮ ಮತ್ತು ಶ್ರೀ ಶಾರದಾ ದೇವಿಯ ಪ್ರತಿಷ್ಠಾಪನೆ ನಡೆಯಿತು. ಬಳಿಕ ಐವರ್ನಾಡು ಗ್ರಾಮಸ್ಥರಿಗೆ ವಿವಿಧ ಸ್ಪರ್ಧೆಗಳು ನಡೆಯಿತು. ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ ನಡೆಯಿತು.
ಸಂಜೆ ಪ್ರಾಥಮಿಕ ಶಾಲಾ ಮಕ್ಕಳ ಹಾಗೂ ಅಂಗನವಾಡಿ ಮಕ್ಕಳ ಡ್ಯಾನ್ಸ್ ನಡೆಯಿತು. ರಾತ್ರಿ ಶ್ರೀ ದೇವರಿಗೆ ಮಹಾಪೂಜೆ,ಪ್ರಸಾದ ವಿತರಣೆ ನಡೆಯಿತು. ಮಹಾಪೂಜೆ ನಡೆಯುವ ಸಂದರ್ಭದಲ್ಲಿ ಅಮೋಘ ಸಿಡಿಮದ್ದಿನ ಪ್ರದರ್ಶನ ನಡೆಯಿತು.


ಬಳಿಕ ಸಾರ್ವಜನಿಕರಿಗೆ ಅನ್ನಪ್ರಸಾದ ನಡೆಯಿತು. ರಾತ್ರಿ ವಿಠಲ ನಾಯಕ್ ಮತ್ತು ಬಳಗದವರಿಂದ “ಗೀತಾ ಸಾಹಿತ್ಯ ಸಂಭ್ರಮ” ನೋಡುಗರ ಮನಸೆಳೆಯಿತು.


ಬೈರವಿ ನಾಟ್ಯಾಲಯ ಐವರ್ನಾಡು ಇವರಿಂದ “ನೃತ್ಯಾರ್ಪಣಂ” ಹಾಗೂ ಫ್ಯೂಶನ್ ಇನ್ಸಿಟ್ಯೂಟ್ ಆಫ್ ಡ್ಯಾನ್ಸ್ ಸುಳ್ಯ ತಂಡದವರಿಂದ “ಡ್ಯಾನ್ಸ್‌ ಡ್ಯಾನ್ಸ್ “,ಯುವಶಕ್ತಿ ಸದಸ್ಯರಿಂದ “ಕಾರ್ಯಕ್ರಮ ವೈವಿಧ್ಯ” ನೋಡುಗರನ್ನು ಮನರಂಜಿಸಿತು.


ಅ.06 ರಂದು ಬೆಳಿಗ್ಗೆ ಭಜನಾ ಕಾರ್ಯಕ್ರಮ,ಅಕ್ಷರಾಭ್ಯಾಸ, ಆಯುಧ ಪೂಜೆ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ ಶ್ರೀ ಶಾರದಾ ದೇವಿಯ ವೈಭವದ ಶೋಭಾಯಾತ್ರೆ ಐವರ್ನಾಡು ಮುಖ್ಯ ರಸ್ತೆಯಲ್ಲಿ ಸಾಗಿ ಬಾಂಜಿಕೋಡಿ ಹೊಳೆಯಲ್ಲಿ ಜಲಸ್ತಂಭನಾ ಮಾಡಲಾಗುವುದು.