ಎಸ್.ಎಸ್.ಪಿ.ಯು ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯರಾಗಿ ಶ್ರೀಮತಿ ನಂದಾ ಅಧಿಕಾರ ಸ್ವೀಕಾರ

0

ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯರಾಗಿ ಶ್ರೀಮತಿ ನಂದಾ ಇವರು ಸೆ.30 ರಂದು ಅಧಿಕಾರ ಸ್ವೀಕರಿಸಿದರು.

2003 ರಲ್ಲಿ ಕರ್ತವ್ಯಕ್ಕೆ ಸೇರಿದ್ದ ಇವರು ಆಂಗ್ಲಭಾಷಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತಿದ್ದಾರೆ. ಸೆ.30 ರಂದು ಈ ಹಿಂದಿನ ಮುಖ್ಯೋಪಾಧ್ಯಾಯರಾದ ಯಶವಂತ ರೈ ನಿವೃತ್ತರಾಗಿದ್ದರಿಂದ ತೆರವಾದ ಸ್ಥಾನಕ್ಕೆ ಶ್ರೀಮತಿ ನಂದಾ ಮುಖ್ಯೋಪಾಧ್ಯಾಯರಾಗಿ ಜವಾಬ್ದಾರಿ ವಹಿಸಲಾಗಿದೆ. ನಂದಾ ಅವರು ಪ್ರಸ್ತುತ ಕಡಬ ತಾಲ್ಲೂಕು ಕೋಡಿಂಬಾಳ ಗ್ರಾಮದ ಕೊರಂದೂರು ನಿವಾಸಿ. ಇವರ ಪತಿ ಹರೀಶ್ ನಾಯ್ಕ್ ಇಂಜಿನಿಯರ್ ವೃತ್ತಿ ನಡೆಸುತಿದ್ದಾರೆ.