ಆಲೆಟ್ಟಿ ಕಸ್ತೂರಿ ಬಾ ಮಹಿಳಾ ಮಂಡಲದಲ್ಲಿ ಶಾರದಾ ದೇವಿಯ ಪೂಜೆ

0

ಆಲೆಟ್ಟಿ ಕಸ್ತೂರಿ ಬಾ ಮಹಿಳಾ ಮಂಡಲದಲ್ಲಿ ನವರಾತ್ರಿ ಉತ್ಸವದ ಸಂದರ್ಭದಲ್ಲಿ ವಿಶೇಷವಾಗಿ ಶ್ರೀ ಶಾರದಾ ಮಾತೆಯ ಪೂಜೆಯನ್ನು ನೆರವೇರಿಸಲಾಯಿತು.

ಮಹಿಳಾ ಮಂಡಲದ ಸದಸ್ಯರ ಭಜನಾ ಸಂಕೀರ್ತನೆಯೊಂದಿಗೆ ಮಧ್ಯಾಹ್ನ ಮಹಾ ಮಂಗಳಾರತಿ ಬೆಳಗಿ ಪೂಜೆಯನ್ನು ನೆರವೇರಿಸಿದರು. ಆಗಮಿಸಿದ ಎಲ್ಲರಿಗೂ ಪ್ರಸಾದ ವಿತರಿಸಲಾಯಿತು. ಮಹಿಳಾ ಮಂಡಲದ ಸದಸ್ಯರು ಸಹಕರಿಸಿದರು.