ಇಂದು ಏನೆಕಲ್ಲಿನ ಪೀಕಟೆಮಜಲಿನಲ್ಲಿ ಶ್ರೀ ಹೊಸಮ್ಮ ದೈವದ ನೇಮೋತ್ಸವ

0

ಯೇನೆಕಲ್ಲಿನ ಪೀಕಟೆ ಮಜಲು ಎಂಬಲ್ಲಿ ಶ್ರೀ ಹೊಸಮ್ಮ ದೈವದ ನೇಮೋತ್ಸವ, ವಿವಿಧ ವೈದಿಕ ಕಾರ್ಯಗಳು ಅ. 9ರಂದು ನಡೆಯಲಿದೆ.
ಬೆಳಿಗ್ಗೆ 9.30ಕ್ಕೆ ಗಣಪತಿ ಹೋಮ, ನಾಗದೇವರ ತಂಬಿಲ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ 2.30ರಿಂದ ಸಪ್ತಶತಿ ಪಾರಾಯಣ, ಸಂಜೆ 4.30ರಿಂದ ದುರ್ಗಾಪೂಜೆ, ದೈವದ ಭಂಡಾರ ತೆಗೆಯುವುದು ನಡೆಯಲಿದೆ. ರಾತ್ರಿ 7 ಗಂಟೆಗೆ ವಾಹನ ಪೂಜೆ, ಬಳಿಕ ಅನ್ನಸಂತರ್ಪಣೆ ನಡೆದು ಹೊಸಮ್ಮ ದೈವದ ನೇಮೋತ್ಸವ ನಡೆಯಲಿದೆ.