ಸರಕಾರಿ ನೌಕರರ ಸಂಘದ ಚುನಾವಣೆ : ನಾಮಪತ್ರ ಸಲ್ಲಿಕೆ ಆರಂಭ

0

ಮೊದಲ ದಿನ 1 ನಾಮಪತ್ರ

ಸರಕಾರಿ ನೌಕರರ ಸಂಘದ ಸುಳ್ಯ ಶಾಖೆಯ ನೂತನ ಆಡಳಿತ ಮಂಡಳಿಗೆ ಅ.28ರಂದು‌ ಚುನಾವಣೆ ನಡೆಯಲಿದ್ದು, ಅ.9 ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ.

ಇಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಡಳಿತ ಕಚೇರಿಯ ವಿಭಾಗದಿಂದ ಶಿವಪ್ರಸಾದ್ ಕೆ.ವಿ. ಯವರು ನಾಮಪತ್ರ ಸಲ್ಲಿಸಿದ್ದಾರೆ.

ಮುಖ್ಯ ಚುನಾವಣಾಧಿಕಾರಿ ಅಚ್ಯುತ ಪಿ ಯವರು ನಾಮಪತ್ರ ಸ್ವೀಕರಿಸಿದರು.

ಸುಳ್ಯ ತಾಲೂಕಿನ ಒಟ್ಟು ಸರಕಾರಿ ಇಲಾಖೆಗಳಿಂದ 33 ನಿರ್ದೇಶಕ ಸ್ಥಾನಗಳಿವೆ. ಅ.18 ರವರೆಗೆ ನಾಮಪತ್ರ ಸಲ್ಲಿಕೆ ಗೆ ಅವಕಾಶ ನೀಡಲಾಗಿದೆ.

ಅ.28 ರಂದು‌ ಚುನಾವಣೆ ನಡೆಯಲಿದ್ದು ಅಂದೇ ಸಂಜೆ ಮತ ಎಣಿಕೆ ನಡೆದು ಫಲಿತಾಂಶ ಘೋಷಣೆ ಯಾಗಲಿದೆ.