ಸುಳ್ಯ ಪೊಲೀಸ್ ಠಾಣೆ ಯಲ್ಲಿ ಆಯುಧ ಪೂಜೆ

0

ನ್ಯಾಯಾಧೀಶರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿ

ಸುಳ್ಯ ಪೊಲೀಸ್ ಠಾಣೆಯಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಆಯುಧ ಪೂಜೆ ಹಾಗೂ ವಾಹನಗಳ ಪೂಜೆ
ಅ.11ರಂದು ನಡೆಯಿತು.

ಪುರೋಹಿತ ಬ್ರಹ್ಮಶ್ರೀ ನಾಗರಾಜ್ ಭಟ್ ಹಳೆಗೇಟು ರವರ ನೇತೃತ್ವದಲ್ಲಿ ದುರ್ಗಾದೇವಿಯ ಪೂಜೆ ಹಾಗೂ ಆಯುಧ ಪೂಜೆ ಹಾಗೂ ವಾಹನಗಳ ಪೂಜೆ ನೆರವೇರಿತು.

ಸುಳ್ಯ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಬಿ ಮೋಹನ್ ಬಾಬು,ಸುಳ್ಯ ವೃತ್ತ ನಿರೀಕ್ಷಿಕರಾದ ತಿಮ್ಮಪ್ಪ ನಾಯ್ಕ್ ಈ ಸಂದರ್ಭದಲ್ಲಿ ಠಾಣೆಗೆ ಭೇಟಿ ನೀಡಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಸಂತೋಷ್ ರವರ ನೇತೃತ್ವದಲ್ಲಿ ಸಂಭ್ರಮದ ಆಯುಧ ಪೂಜೆ ನೆರವೇರಿತು.

ಕಾರ್ಯಕ್ರಮಕ್ಕೆ ಸುಳ್ಯದ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳ ಮುಖಂಡರುಗಳಾದ ಡಾ ಡಿ ವಿ ಲೀಲಾಧರ್, ವಕೀಲರಾದ ಎಮ್ ವೆಂಕಪ್ಪಗೌಡ,ಪಿ ಎಸ್ ಗಂಗಾಧರ್,ಧನಂಜಯ ಅಡ್ಪಂಗಾಯ,ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದ್ರೆ ಎ, ಮುಖಂಡರುಗಳಾದ ನಾರಾಯಣ ಕೇಕಡ್ಕ,ಸುಳ್ಯ ಪ್ಲಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್,ಶಾಹುಲ್ ಹಮೀದ್ ಕುತ್ತಮಟ್ಟೆ, ಮೊಹಮ್ಮದ್ ಕುಂಞಿ ಗೂನಡ್ಕ ,ಶಾಫೀ ಕುತ್ತಮಟ್ಟೆ, ರಂಜಿತ್ ಪೂಜಾರಿ, ಅಶೋಕ್ ಅಡ್ಕಾರ್,ಶಿಹಾಬ್ ಕಟ್ಟೆಕ್ಕಾರ್ಸ್, ಹಾಗೂ ಸ್ಥಳೀಯ ಉದ್ಯಮಿಗಳು ಭಾಗವಹಿಸಿದ್ದರು.

ನವರಾತ್ರಿಯ ಅಂಗವಾಗಿ ಠಾಣೆಯ ಆಯುಧಗಳು ಹಾಗೂ ವಾಹನಗಳಿಗೆ ಪೂಜಾ ಕಾರ್ಯಕ್ರಮ ನೆರವೇರಿ ಕೊನೆಯಲ್ಲಿ ಅನ್ನಪ್ರಸಾದ ವಿತರಿಸಲಾಯಿತು.

ಠಾಣೆಯ ಎಲ್ಲಾ ಅಧಿಕಾರಿಗಳು ಸಿಬ್ಬಂದಿಗಳು ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಸಂಭ್ರಮ ಮೆರೆದರು.