ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಮನಸೂರೆಗೊಂಡ ಬೆಳ್ಳಾರೆಯ ಡ್ಯಾನ್ಸ್ & ಬೀಟ್ಸ್ ನೃತ್ಯ ತಂಡ

0

ಜೀವನ್ ಟಿ.ಎನ್. ಬೆಳ್ಳಾರೆ ಸಾರಥ್ಯದ ಡ್ಯಾನ್ಸ್ & ಬೀಟ್ಸ್ ನೃತ್ಯ ತಂಡದ ಬೆಳ್ಳಾರೆ, ಪಂಜ, ಕೈಕಂಬ ಮತ್ತು ಹಿರಿಯ ವಿದ್ಯಾರ್ಥಿಗಳನ್ನು ಒಳಗೊಂಡ ಅ. 11 ರಂದು ಮೈಸೂರಿನ ಅರಮನೆ ವೇದಿಕೆಯಲ್ಲಿ ಮೈಸೂರು ದಸರಾ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು.

ಒಂದು ಗಂಟೆ ಕಾಲ ಅದ್ಭುತ ನೃತ್ಯ ಪ್ರದರ್ಶನ ನೀಡಿ ಕಲಾ ಪ್ರೇಮಿಗಳ ಮತ್ತು ಅಯೋಜಕರ ಪ್ರಶಂಸೆಗೆ ಪಾತ್ರವಾಗಿ ತಂಡದ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತು.

ತಂಡದ ಜೊತೆಗೆ ಸಹ ಕಲಾವಿದರ ತಂಡ, ಎಲ್ಲಾ ವಿಧ್ಯಾರ್ಥಿಗಳ ಜವಾಬ್ದಾರಿಯನ್ನು ತೆಗೆದುಕೊಂಡ ಪೋಷಕರು ತಂಡದ ಯಶಸ್ಸಿಗೆ ಸಹಕರಿಸಿದರು.