ಅ.31: ಅರಂತೋಡು ಸರಕಾರಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕಿ ಸರಸ್ವತಿ ಸೇವೆಯಿಂದ ನಿವೃತ್ತಿ

0

ಅರಂತೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಧೀರ್ಘ 35 ವರ್ಷಗಳ ಕಾಲ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಸರಸ್ವತಿಯವರು ಅ.31 ರಂದು ನಿವೃತ್ತಿಗೊಳ್ಳಲಿದ್ದು ಇವರಿಗೆ ವಿದಾಯ ಸಮಾರಂಭವನ್ನು ಅ.29 ರಂದು ನಡೆಸಲು ನಿರ್ಧರಿಸಲಾಗಿದ್ದು, ಅದ್ದೂರಿ ವಿದಾಯ ಸಮಾರಂಭ ನಡೆಸಲು ಶಾಲಾ ಎಸ್.ಡಿ.ಎಂ.ಸಿ, ಪೋಷಕರು, ಹಿರಿಯ ವಿದ್ಯಾರ್ಥಿ ಸಂಘ ಹಾಗೂ ವಿದ್ಯಾಭಿಮಾನಿಗಳ ಸಭೆಯನ್ನು ಅ.14 ರಂದು ಕರೆದು ಸನ್ಮಾನ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಎ.ವಿ. ತೀರ್ಥರಾಮ ಅಡ್ಕಬಳೆ, ಕಾರ್ಯದರ್ಶಿ ಎ.ಅಬ್ದುಲ್ಲ, ಕೋಶಾಧಿಕಾರಿ ಶಾಲಾ ಶಿಕ್ಷಕಿ ಭಾನುಮತಿ ಆಯ್ಕೆಯಾದರು.

ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಸುರೇಶ್ ಉಳುವಾರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ನಾಯ್ಕ್, ಗ್ರಾಮ ಪಂಚಾಯತ್ ಸದಸ್ಯ ಮಾಲಿನಿ ವಿನೋದ್, ಕೆ.ಆರ್. ಪದ್ಮನಾಭ ಕುರುಂಜಿ, ಅಶ್ರಫ್ ಗುಂಡಿ, ಹೊನ್ನಪ್ಪ ಮಾಸ್ತರ್ ಅಡ್ತಲೆ, ಜತ್ತಪ್ಪ ಮಾಸ್ತರ್ ಅಳಿಕೆ, ಕಿಶೋರ್ ಕುಮಾರ್ ಕಿರ್ಲಾಯ, ಹರಿಪ್ರಸಾದ್ ಕಲ್ಲುಗದ್ದೆ, ಕುಸುಮಾಧರ ಅಡ್ಕಬಳೆ, ಲೋಹಿತಾಶ್ವ ಕೆ.ಎಸ್, ಯಶವಂತ ನಂಗಾರು, ರವಿಚಂದ್ರ ಎ.ಕೆ, ಜಯಂತಿ, ಚೇತನ, ಜಯಶ್ರೀ, ವಾರಿಜ ಕುರುಂಜಿ, ಸಂತೋಷ್ ಕಿರ್ಲಾಯ, ಶಿವರಾಮ ನೆಕ್ಕಿಲ, ಗೋಪಾಲಕೃಷ್ಣ ಪಿಂಡಿಮನೆ, ಕೆ.ಆರ್ ಪುಂಡರಿಕ, ತಾಜುದ್ಧೀನ್ ಅರಂತೋಡು ಹಾಗೂ ಶಾಲಾ ಎಸ್.ಡಿ.ಎಂ.ಸಿ ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು. ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಬನ ಸ್ವಾಗತಿಸಿದರು. ಶಿಕ್ಷಕಿ ಬಾನುಮತಿ ವಂದಿಸಿದರು.