ಹರಿಹರ ಪಳ್ಳತ್ತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನದ ಎದುರು ಭಾಗದಲ್ಲಿ ಹರಿಯುವ ನದಿಯ ಸಂಗಮ ಕ್ಷೇತ್ರದಲ್ಲಿ ತೀರ್ಥೋದ್ಭವವು ಅ.17 ಗುರುವಾರ ಬೆಳಿಗ್ಗೆ 7.40ಕ್ಕೆ ನಡೆಯಿತು.
ಶ್ರೀ ದೇವಲದ ಪೂರ್ವ ದಿಕ್ಕಿನಲ್ಲಿರುವ ಸಿದ್ದಪರ್ವತದಿಂದ ಕೋಟಿ ತೀರ್ಥನದಿಯು ಹರಿಯುತ್ತಿದ್ದು ಈ ನದಿಯು ದೇವಸ್ಥಾನದ ಎದುರಿನಲ್ಲಿ ಸಂಗಮಗೊಂಡು ಅಘನಾಶಿನಿಯಾಗಿ ಮುಂದಕ್ಕೆ ಹರಿಯುತ್ತದೆ,ತುಲಾ ಸಂಕ್ರಮಣದಂದು ಅಘನಾಶಿನಿ ಎಂಬಲ್ಲಿ 7.40ರ ಶುಭಮೂಹೂರ್ತದಲ್ಲಿ ತೀರ್ಥೋದ್ಭವವಾಗಿದ್ದು,ದೇವಲದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ನರಸಿಂಹ ಭಟ್ ನದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ತದನಂತರ ಭಕ್ತರಿಂದ ತೀರ್ಥಸ್ನಾನ ನೆರವೇರಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರು,ಊರಪವೂರ ಭಕ್ತಾದಿಗಳು ಹಾಜರಿದ್ದರು.