ಕನಕಮಜಲು : ಯುವಕ ಮಂಡಲದ ವಾರ್ಷಿಕ ಮಹಾಸಭೆ ಮತ್ತು ಪದಗ್ರಹಣ ಸಮಾರಂಭ

0

ಯುವಜನ ವಿಕಾಸ ಕೇಂದ್ರ ಯುವಕ ಮಂಡಲ(ರಿ) ಕನಕಮಜಲು ಇದರ ವಾರ್ಷಿಕ ಮಹಾಸಭೆ ಮತ್ತು ಪದಗ್ರಹಣ ಸಮಾರಂಭ ಕಾರ್ಯಕ್ರಮವು ಶ್ರೀ ಆತ್ಮಾರಾಮ ಸಭಾಭವನದಲ್ಲಿ ಅ. 20 ರಂದು ನಡೆಯಿತು.

ವಾರ್ಷಿಕ ಮಹಾಸಭೆಯ ಸಭಾಧ್ಯಕ್ಷತೆಯನ್ನು ಯುವಕ ಮಂಡಲ ಅಧ್ಯಕ್ಷ ರಕ್ಷಿತ್ ಅಕ್ಕಿಮಲೆ ವಹಿಸಿದ್ದರು.

ಒಂದು ವರ್ಷದ ಕಾರ್ಯಕ್ರಮದ ವರದಿಯನ್ನು ಕಾರ್ಯದರ್ಶಿ ಸ್ವಸ್ತಿಕ್ ಕುತ್ಯಾಳ ವಾಚಿಸಿದರು. ಖಜಾಂಜಿ ಹರ್ಷಿತ್ ಉಗ್ಗಮೂಲೆ ಲೆಕ್ಕಪತ್ರ ಮಂಡಿಸಿದರು.

ವೇದಿಕೆಯಲ್ಲಿ ಗೌರವಾಧ್ಯಕ್ಷ ಚಂದ್ರಶೇಖರ್ ನೆಡಿಲು ಉಪಸ್ಥಿತರಿದ್ದರು. 2024- 25 ನೆ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಗೌರವಾಧ್ಯಕ್ಷ ಚಂದ್ರಶೇಖರ್ ನೆಡಿಲು ನಡೆಸಿಕೊಟ್ಟರು. ಈಶ್ವರ ಕೋರಂಬಡ್ಕ ಕಾರ್ಯಕ್ರಮ ನಿರೂಪಿಸಿ, ಶಮಂತ್ ಅಕ್ಕಿಮಲೆ ವಂದಿಸಿದರು.


ಪದಗ್ರಹಣ ಸಮಾರಂಭದ ಸಭಾಧ್ಯಕ್ಷತೆಯನ್ನು ರಕ್ಷಿತ್ ಅಕ್ಕಿಮಲೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗುರುದೇವ ಕಲಾ ಕೇಂದ್ರ ಮಂಡ್ಯ ಇದರ ನಿರ್ದೇಶಕ
ರಾಧಾಕೃಷ್ಣ ಮೂರ್ಜೆ, ಯುವಜನ ಸಂಯುಕ್ತ ಮಂಡಳಿ ನಿರ್ದೇಶಕ ಪ್ರಸಾದ್ ಕಾಟೂರು ಉಪಸ್ಥಿತರಿದ್ದು ಶುಭ ಹಾರೈಸಿದರು.

ವೇದಿಕೆಯಲ್ಲಿ ಗೌರವಾಧ್ಯಕ್ಷ ಚಂದ್ರಶೇಖರ್ ನೆಡಿಲು, ನೂತನ ಅಧ್ಯಕ್ಷ ಹರ್ಷಿತ್ ಉಗ್ಗಮೂಲೆ, ನೂತನ ಕಾರ್ಯದರ್ಶಿ ಅಶ್ವತ್ ಅಡ್ಕಾರ್ ಹಾಗೂ ನಿರ್ಗಮಿತ ಕಾರ್ಯದರ್ಶಿ ಸ್ವಸ್ತಿಕ್ ಕುತ್ಯಾಳ ಉಪಸ್ಥಿತರಿದ್ದರು.

2024 -25ರ ಸಾಲಿನ ನೂತನ ಪದಾಧಿಕಾರಿಗಳಿಗೆ ಯುವಜನ ಸಂಯುಕ್ತ ಮಂಡಳಿ ನಿರ್ದೇಶಕ ಪ್ರಸಾದ್ ಕಾಟೂರು ಪ್ರಮಾಣವಚನ ಬೋಧಿಸಿದರು.
ಗೌರವಾಧ್ಯಕ್ಷರಾಗಿ ರಕ್ಷಿತ್ ಅಕ್ಕಿಮಲೆ, ಅಧ್ಯಕ್ಷರಾಗಿ ಹರ್ಷಿತ್ ಉಗ್ಗಮೂಲೆ, ಉಪಾಧ್ಯಕ್ಷರಾಗಿ ಸ್ವಸ್ತಿಕ್ ಕುತ್ಯಾಳ, ಕಾರ್ಯದರ್ಶಿಯಾಗಿ ಅಶ್ವಥ್ ಅಡ್ಕಾರ್, ಜೊತೆ ಕಾರ್ಯದರ್ಶಿಯಾಗಿ ಶಮಂತ್ ಅಕ್ಕಿಮಲೆ, ಖಜಾಂಜಿಯಾಗಿ ಪುನೀತ್ ಸಾಂತ್ಯಡ್ಕ, ಕ್ರೀಡಾ ಕಾರ್ಯದರ್ಶಿಯಾಗಿ ಚೇತನ್ ನೆಡಿಲು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರತನ್ ಕೊಲ್ಲಂತ್ತಡ್ಕ ಪತ್ರಿಕಾ ಪ್ರತಿನಿಧಿಯಾಗಿ ಪ್ರಖ್ಯಾತ್ ಕೊಡ್ತಿಲು, ನಿರ್ದೇಶಕರುಗಳಾಗಿ ಜ್ಞಾನೇಶ್ ಕುದ್ಕುಳಿ, ಅವಿನ್ ಮಳಿ, ಶ್ರವಣ್ ರೈ ಕದಿಕಡ್ಕ, ಕ್ಷಿತಿಜ್ ಕಾರಿಂಜ, ಪವನ್ ಕುತ್ಯಾಳ, ಕೀರ್ತಿ ಕನ್ನಡ್ಕ, ಭವಿಷ್ ಮಾಣಿಕೋಡಿ ಆಯ್ಕೆಯಾದರು.

ಈ ಸಂದರ್ಭದಲ್ಲಿ ಯುವಕ ಮಂಡಲದ ಎಲ್ಲಾ ಪೂರ್ವಾದ್ಯಕ್ಷರುಗಳು, ಪದಾಧಿಕಾರಿಗಳು, ನಿರ್ದೇಶಕರುಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ಈಶ್ವರ ಕೊರಂಬಡ್ಕ ನಿರೂಪಿಸಿದರು, ಅಶ್ವತ್ ಅಡ್ಕಾರ್ ವಂದಿಸಿದರು.