ಸುಳ್ಯ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕು. ಇಂಚರಾ ಪಿ.ಅರ್. ಎತ್ತರ ಜಿಗಿತ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

0

ರಾಜ್ಯ ಶಾಲಾ ಶಿಕ್ಷಣ ( ಪದವಿ ಪೂರ್ವ ) ಇಲಾಖೆಯ ವತಿಯಿಂದ ಅಕ್ಟೋಬರ್ 22 ರಂದು ಮೂಡಬಿದರೆಯ ಆಳ್ವಾಸ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ, ಆಲೆಟ್ಟಿ ಗ್ರಾಮದ ರಾಜೇಶ ಟಿ. ಮತ್ತು ಶ್ರೀಮತಿ ಸವಿತ ಎಸ್. ರವರ ಪುತ್ರಿ ಕು. ಇಂಚರ ಪಿ.ಅರ್. ಎತ್ತರ ಜಿಗಿತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ- ಚಿನ್ನದ ಪದಕ ಪಡೆದು, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಇನ್ನೊರ್ವ ವಿದ್ಯಾರ್ಥಿನಿ ಆರಂತೋಡು ಗ್ರಾಮದ ಭವಾನಿಶಂಕರ ಕೆ.ಅರ್. ಮತ್ತು ಶ್ರೀಮತಿ ಕುಸುಮಾ ಕೆ.ಅರ್. ರವರ ಪುತ್ರಿ ಕು.ಅನನ್ಯ ಕೆ.ಬಿ. ಎತ್ತರ ಜಿಗಿತ ಸ್ಪರ್ಧೆಯಲ್ಲಿ ತೃತೀಯ ಸ್ಥಾನ- ಕಂಚಿನ ಪದಕ ಪಡೆದಿರುತ್ತಾಳೆ.