Home Uncategorized ದುಗ್ಗಲಡ್ಕ‌ ಶ್ರೀ ದುಗ್ಗಲಾಯ ನೇಮೋತ್ಸವ- ಹಸಿರುವಾಣಿ ಮೆರವಣಿಗೆ

ದುಗ್ಗಲಡ್ಕ‌ ಶ್ರೀ ದುಗ್ಗಲಾಯ ನೇಮೋತ್ಸವ- ಹಸಿರುವಾಣಿ ಮೆರವಣಿಗೆ

0

ದುಗ್ಗಲಡ್ಕದ ಶ್ರೀ ದುಗ್ಗಲಾಯ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮಾ.19ಮತ್ತು 20 ರಂದು ನಡೆಯಲಿದ್ದು, ಇಂದು ಸಂಜೆ ಹಸಿರುವಾಣಿ ಮೆರವಣಿಗೆ ನಡೆಯಿತು.
ಕಲ್ದಂಬೆಯಿಂದ ಹಸಿರುವಾಣಿ ಮೆರವಣಿಗೆ ದೈವಸ್ಥಾನಕ್ಕೆ ಆಗಮಿಸಿ ಉಗ್ರಾಣ ತುಂಬಿಸಲಾಯಿತು.

ದೈವಸ್ಥಾನದ ಆಡಳಿತ ಮೊಕ್ತೇಸರರಾದ ರಾಘವೇಂದ್ರ ಭಟ್ ಕಲ್ದಂಬೆ ಕೇಸರಿ ಧ್ವಜ ಹಾರಿಸಿ ಮೆರವಣಿಗೆಗೆ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ದೈವಸ್ಥಾನ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಕಜೆ, ಮಾಜಿ ಅಧ್ಯಕ್ಷ ದಯಾನಂದ ಸಾಲಿಯಾನ್ ಮೂಡೆಕಲ್ಲು, ಕಾರ್ಯದರ್ಶಿ ಶೇಖರ್ ಕುದ್ಪಾಜೆ,ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ಪ್ರಭಾವತಿ ರೈ, ಯುವ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ನಾಯ್ಕ, ನ.ಪಂ.ಸದಸ್ಯ ಬಾಲಕೃಷ್ಣ ರೈ, ಸಮಿತಿಗಳ ಸದಸ್ಯರು, ಊರವರು ಉಪಸ್ಥಿತರಿದ್ದರು.
ಮೆರವಣಿಗೆಯಲ್ಲಿ ಶ್ರೀ ಮಹಮ್ಮಾಯಿ ಕುಣಿತ ಭಜನಾ ತಂಡ ದೇಲಂಪಾಡಿ ಇವರಿಂದ ಆಕರ್ಷಕ ಕುಣಿತ ಭಜನೆ ನಡೆಯಿತು.ಬಳಿಕ ವೇದಿಕೆಯಲ್ಲಿ ಶ್ರೀ ದುರ್ಗಾ ಭಜನಾ ಮಂಡಳಿ ಮರಕತ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.

NO COMMENTS

error: Content is protected !!
Breaking