ಅಜ್ಜಾವರ, ಮಂಡೆಕೋಲು ಭಾಗದ ಶಾಲೆಗಳಿಗೆ ಕೊಡುಗೆ
ದ ಕ ಜಿಲ್ಲಾ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕ,ಸುಳ್ಯ ಮತ್ತು ಪಂಜ ಹೋಬಳಿ ಘಟಕಗಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸದ ಸವಿ ನೆನಪಿಗಾಗಿ ಕರ್ನಾಟಕದ ಜ್ಞಾನಪೀಠ ಪುರಸ್ಕೃತರ ಭಾವಚಿತ್ರಗಳನ್ನು ತಾಲೂಕಿನ ವಿದ್ಯಾ ಸಂಸ್ಥೆಗಳಿಗೆ ವಿತರಿಸುವ ಕಾರ್ಯಕ್ರಮ ನಡೆಯುತಿದೆ.
ಅಜ್ಜಾವರ ಮತ್ತು ಮಂಡೆಕೋಲು ಗ್ರಾಮಗಳ ಹತ್ತು ಶಾಲೆಗಳಿಗೆ ಪ್ರಾಯೋಜಕರ ಸಮ್ಮುಖದಲ್ಲಿ ಕಸಾಪ ಸುಳ್ಯ ಘಟಕದ ಕಾರ್ಯಕಾರಿಣಿ ಸದಸ್ಯೆಯರಾದ ಶ್ರೀಮತಿ ಶಶ್ಮಿಭಟ್ ಅಜ್ಜಾವರ ಮತ್ತು ಶ್ರೀಮತಿ ಸಾವಿತ್ರಿ ಕಣೆಮರಡ್ಕ ಇವರ ನೇತೃತ್ವದಲ್ಲಿ ವಿತರಿಸಲಾಯಿತು.
ಸ.ಹಿ ಪ್ರಾ ಶಾಲೆ ಕಾಂತಮಂಗಲ,
ಮುಳ್ಯ- ಅಟ್ಲೂರು ಶಾಲೆ,
ಸರಕಾರಿ ಕಿರಿಯ ಪ್ರಾ ಶಾಲೆ ಮೇನಾಲ,
ಸ.ಹಿ.ಪ್ರಾ ಶಾಲೆ ಅಜ್ಜಾವರ,
ಸರಕಾರಿ ಪ್ರೌಢಶಾಲೆ ಅಜ್ಜಾವರ,
ಸರಕಾರಿ ಹಿ.ಪ್ರಾ ಶಾಲೆ ಮಂಡೆಕೋಲು,ಸ.ಹಿ.ಪ್ರಾ ಶಾಲೆ ಅಡ್ಪoಗಾಯ,
ಸ.ಕಿ.ಪ್ರಾ ಶಾಲೆ ಪುತ್ಯ,
ಗ್ರಂಥಾಲಯ ಮಂಡೆಕೋಲು,
ಸ.ಹಿ.ಪ್ರಾ ಶಾಲೆ ಪೇರಾಲು ಶಾಲೆಗೆ ಹಸ್ತಾಂತರಿಸಲಾಯಿತು.
ಗೋಪಿನಾಥ್ ಮೆತ್ತಡ್ಕ, ಕೇಶವ.ಸಿ ಎ ಮತ್ತು ದ. ಕ ಜಿಲ್ಲಾ ಸದಸ್ಯರಾದ ರಾಮಚಂದ್ರ ಪಲ್ಲತಡ್ಕ ಸಹಕರಿಸಿದರು. ನಿರಂಜನ್ ಎಂ ಡಿ, ಮಧುರ ಎಂ ಆರ್. ದೀಕ್ಷಾ ಬಟ್ಟೆ ಅಂಗಡಿ ಸುಳ್ಯ, ಗೋಪಿನಾಥ್ ಮೆತ್ತಡ್ಕ, ಶ್ರೀಮತಿ ಸಾವಿತ್ರಿ ಕಣೆಮರಡ್ಕ, ಸಿ. ಎ ಬ್ಯಾಂಕ್ ಸುಳ್ಯ ,ರಾಮಕೃಷ್ಣ ಗೌಡ,
ರಾಮಚಂದ್ರ ಪಲ್ಲತ್ತಡ್ಕ ಇವರುಗಳು ಜ್ಞಾನಪೀಠ ಪುರಸ್ಕೃತ ಭಾವಚಿತ್ರದ ಪ್ರಾಯೋಜಕರಾಗಿ ಸಹಕರಿಸಿದರು.