ಬೆಳ್ಳಾರೆ ಹೋಟೆಲ್ ಸಾಯಿ ಸಾಗರ್ ಮಾಲಕ ರವೀಂದ್ರ ಪೂಂಜ ನಿಧನ

0

ಮೂಲತಃ ಬಂಟ್ವಾಳ ತಾಲೂಕಿನ ಸರಪಾಡಿಯವರಾಗಿದ್ದು, ಕಳೆದ 20 ವರ್ಷಗಳಿಂದ ಬೆಳ್ಳಾರೆಯಲ್ಲಿ ವಾಸವಾಗಿದ್ದು, ಬೆಳ್ಳಾರೆ ಮೇಲಿನ ಪೇಟೆಯ ಅಮ್ಮು ರೈ ಕಾಂಪ್ಲೆಕ್ಸ್ ನ ದೇವಿ ಹೈಟ್ಸ್ ನಲ್ಲಿ ಕಳೆದ ಎರಡು ವರ್ಷಗಳಿಂದ ಹೋಟೆಲ್ ಉದ್ಯಮ ನಡೆಸುತ್ತಿದ್ದ ಸಾಯಿಸಾಗರ್ ಹೋಟೆಲ್ ಮಾಲಕ ರವೀಂದ್ರ ಪೂಂಜ ಇಂದು (ಏ. 12) ಹೃದಯಾಘಾತದಿಂದ ನಿಧನರಾದರು. ಇವರಿಗೆ 65 ವರ್ಷ ವಯಸ್ಸಾಗಿತ್ತು.


ಕಂಬಳದ ಅಭಿಮಾನಿಯಾಗಿದ್ದ, ಮೃತರು
ಪತ್ನಿ ಶ್ರೀಮತಿ ಮೀನಾಕ್ಷಿ, ಪುತ್ರ ಪ್ರಶಾಂತ್ ಪೂಂಜ, ಪುತ್ರಿ ಕು. ರಮಿತಾ,
ಸಹೋದರಿಯರಾದ ಶ್ರೀಮತಿ ಹೇಮಲತಾ ರಾಧಾಕೃಷ್ಣ ರೈ ಸುರತ್ಕಲ್, ಶ್ರೀಮತಿ ಶೋಭ ಪುರುಷೋತ್ತಮ ಪೂಂಜ ಸುರತ್ಕಲ್ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.