ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದ ಮಾಸಿಕ ಸಭೆಯು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ತಕುಮಾರ್ ಕುಂಚಡ್ಕ ರವರ ಅಧ್ಯಕ್ಷತೆಯಲ್ಲಿ ಅ.26 ರಂದು ನಡೆಯಿತು.
ದೇವಸ್ಥಾನಕ್ಕೆ ಸಂಬಂಧಿಸಿದ ಉಳ್ಳಾಕುಲು ಚಾವಡಿ ನಿರ್ಮಾಣದ ಅಂತಿಮ ಹಂತದ ಕೆಲಸ ಕಾರ್ಯಗಳು ನಡೆಯುತ್ತಿದ್ದು ಬ್ರಹ್ಮಕಲಶೋತ್ಸವದ ದಿನ ನಿಗದಿ ಪಡಿಸುವ ಸಲುವಾಗಿ ಚರ್ಚಿಸಲಾಯಿತು.
ದೇವಸ್ಥಾನದ ಶಾಶ್ವತ ಚಪ್ಪರ ನಿರ್ಮಾಣ ಕಾರ್ಯವು ಪೂರ್ಣಗೊಂಡಿದ್ದು ನೂತನವಾಗಿ ವೇದಿಕೆ ನಿರ್ಮಿಸುವ ಬಗ್ಗೆ ಪ್ರಸ್ತಾಪಿಸಲಾಯಿತು. ಚಪ್ಪರದ ಬಾಬ್ತು ಗ್ರಾಮದ. ಎಲ್ಲಾ ಮನೆಗಳಿಂದ ಧನ ಸಂಗ್ರಹಿಸುವ ಕಾರ್ಯವನ್ನು ಮುಂದುವರಿಸುವುದಾಗಿ ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮೊಕ್ತೇಸರರಾದ ಶ್ರೀಪತಿ ಬೈಪಡಿತ್ತಾಯ, ವ್ಯ.ಸ.ಅಧ್ಯಕ್ಷ ಎನ್.ಎ.ರಾಮಚಂದ್ರ, ಗುಂಡ್ಯ ಮಾಡಾರಮನೆ ಉಳ್ಳಾಕುಲು ದೈವಸ್ಥಾನದ ಅಧ್ಯಕ್ಷ ಅಶೋಕ ಪ್ರಭು ಸುಳ್ಯ,ವ್ಯ.ಸ. ಮಾಜಿ ಅಧ್ಯಕ್ಷ ಪ್ರಸನ್ನ ಕೆ.ಸಿ ಬಡ್ಡಡ್ಕ, ಆರ್ಥಿಕ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ,ವ್ಯ.ಸ.ಸದಸ್ಯರಾದ ಹರಿಪ್ರಸಾದ್ ಕಾಪುಮಲೆ, ಅಚ್ಚುತ ಮಣಿಯಾಣಿ ಆಲೆಟ್ಟಿ, ಶ್ರೀಮತಿ ನಳಿನಿ ರೈ ಆಲೆಟ್ಟಿ ಹಾಗೂ ಸ್ಥಳೀಯರಾದ ಜನಾರ್ದನ ನಾಯ್ಕ್ ಕೇರ್ಪಳ, ದಯಾನಂದ ಪತ್ತುಕುಂಜ, ಯತಿರಾಜ್ ಭೂತಕಲ್ಲು, ರಾಮಚಂದ್ರ ಬಾಳೆಹಿತ್ಲು, ಲಕ್ಷ್ಮಣ ಗೌಡ ಪರಿವಾರ, ನಾರಾಯಣ ರೈ ಆಲೆಟ್ಟಿ, ಪ್ರವೀಣ್ ಆಲೆಟ್ಟಿ, ಸೇವಾ ಸಮಿತಿ ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ ಸ್ವಾಗತಿಸಿದರು. ಭಜನಾ ಸಂಘದ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ವಂದಿಸಿದರು.