ಕುಂಬರ್ಚೋಡುವಿನಲ್ಲಿ ಸ್ಕೂಟಿ ಸ್ಕಿಡ್

0

ಕೋನಡ್ಕಪದವಿನ ವ್ಯಕ್ತಿಯ ತಲೆಗೆ ಗಂಭೀರ ಗಾಯ – ಮಂಗಳೂರಿನ ಆಸ್ಪತ್ರೆಗೆ ರವಾನೆ

ಸ್ಕೂಟಿಯೊಂದು ಸ್ಕಿಡ್ ಆಗಿ ಬಿದ್ದ ಪರಿಣಾಮವಾಗಿ ಸವಾರನ ತಲೆಗೆ ಗಂಭೀರವಾಗಿ ಗಾಯಗೊಂಡು, ಸುಳ್ಯದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ,  ಹೆಚ್ಚಿನ ಚಿಕಿತ್ಸೆಗಾಗಿ  ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾದ  ಘಟನೆ ಜಾಲ್ಸೂರು ಗ್ರಾಮದ ಕುಂಬರ್ಚೋಡುವಿನಲ್ಲಿ ಅ.26ರಂದು ರಾತ್ರಿ ಸಂಭವಿಸಿದೆ.

ಕೋನಡ್ಕಪದವಿನ ಭಾಸ್ಕರ ಪಾಟಾಳಿ ಎಂಬವರು ಸುಳ್ಯದಿಂದ ರಾತ್ರಿ ಮನೆಗೆ ಸ್ಕೂಟಿಯಲ್ಲಿ ಬರುತ್ತಿರುವ ವೇಳೆ ಕುಂಬರ್ಚೋಡು ಮಸೀದಿಯ ಬಳಿ ಮುಖ್ಯರಸ್ತೆಯಲ್ಲಿ ಸ್ಕೂಟಿ ಸ್ಕಿಡ್ ಆಗಿ ಬಿದ್ದಿದ್ದು, ಭಾಸ್ಕರ ಅವರ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ಸೇರಿ ಅವರನ್ನು ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರೆಂದು ತಿಳಿದುಬಂದಿದೆ.

ತಲೆಗೆ ಗಂಭೀರವಾಗಿ ಗಾಯಗೊಂಡು ರಕ್ತ ಸುರಿಯುತ್ತಿರುವುದರಿಂದ ವೈದ್ಯರ ಸಲಹೆಯ ಮೇರೆಗೆ ಅಂಬ್ಯುಲೆನ್ಸ್ ಮೂಲಕ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿರುವುದಾಗಿ ತಿಳಿದುಬಂದಿದೆ.
ಭಾಸ್ಕರ ಪಾಟಾಳಿ ಅವರು ವೃತ್ತಿಯಲ್ಲಿ ಟೈಲರ್ ಆಗಿದ್ದು, ಕಾಸರಗೋಡಿನಲ್ಲಿ ಸ್ವಂತ ಅಂಗಡಿ ನಡೆಸುತ್ತಿದ್ದಾರೆ. ಪ್ರತಿನಿತ್ಯ ತಮ್ಮ ಸ್ಕೂಟಿಯನ್ನು ಸುಳ್ಯ ಅಥವಾ ಜಾಲ್ಸೂರಿನಲ್ಲಿ ಇಟ್ಟು ಬಸ್ಸಿನಲ್ಲಿ ಕಾಸರಗೋಡಿಗೆ ಹೋಗಿ ಬರುತ್ತಿದ್ದರೆನ್ನಲಾಗಿದೆ.