ಕೆವಿಜಿ ಐಪಿಎಸ್ ನಲ್ಲಿ ವಿದ್ಯಾರ್ಥಿಗಳು ಕರಾಟೆಯಲ್ಲಿ ಸಾಧಿಸಿದ ಸಾಧನೆ

0

ಭಾರತೀಯ ಕರಾಟೆ ಸ್ವಯಂ ರಕ್ಷಣಾ ಶಾಲೆ - ಭಾರತ ಮತ್ತು ಮಂಗಳೂರು ಭಾರತೀಯ ಕರಾಟೆ ಡೋಜೋ ಏರ್ಪಡಿಸಿರುವ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ 2024 ಇದರಲ್ಲಿ ಕೆವಿಜಿ ಇಂಟರ್  ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವಿಶೇಷ ಸಾಧನೆಯನ್ನು ಮಾಡಿರುತ್ತಾರೆ.

ಹತ್ತನೇ ತರಗತಿಯ ವರ್ಷಿತ್ ಚಾಂಪಿಯನ್ ಶಿಪ್ ನ ಕಟಾ ವಿಭಾಗದಲ್ಲಿ ಭಾಗವಹಿಸಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ, ಕುಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಬೆಳ್ಳಿ ಪದಕವನ್ನು ಪಡೆದಿರುತ್ತಾನೆ. ಎಂಟನೇ ತರಗತಿಯ ಲಕ್ಷಣ್ ಅಂಬೆಕಲ್ಲು ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ, ಏಳನೇ ತರಗತಿಯ ಫಾತಿಮತ್ ಅಮ್ನ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ, ಆರನೇ ತರಗತಿಯ ಜೀವಿತ್ ಬಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ, ತನ್ವಿತ್ ಕೆ.ಎಸ್ ತೃತೀಯ ಸ್ಥಾನದೊಂದಿಗೆ ಕಂಚು, ವಂಶಿಕ್ ಬಿ.ಹೆಚ್ ತೃತೀಯ ಸ್ಥಾನದೊಂದಿಗೆ ಪಡೆದು ಕಂಚು, ಐದನೇ ತರಗತಿಯ ಉಝರ್ ಅಬ್ಬಾಸ್ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿರುತ್ತಾರೆ.

ಮಕ್ಕಳ ಈ ಸಾಧನೆಗೆ ಶುಭ ಹಾರೈಸಿದ ಶಾಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು. ಜೆ ಶುಭ‌ ಹಾರೈಸುತ್ತಾ ವಿದ್ಯಾರ್ಥಿಗಳು ಯಾವುದೇ ಕ್ಷೇತ್ರದಲ್ಲಿ ಸಫಲತೆ ಸಾಧಿಸಬೇಕಾದರೆ ವಿದ್ಯಾರ್ಥಿಗಳ ಪ್ರಯತ್ನ ಮುಖ್ಯ ‘ಎಂದರು. ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ.ವಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.