ಪ್ರಧಾನ ಮಂತ್ರಿಯವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ಸನಾತನ ಸಂಸ್ಥೆಯ ಶ್ರೀಮತಿ ವಾಣಿ ಕೊರಗಪ್ಪ ಕಲ್ಲೇರಿಯವರ ಮನೆಯಲ್ಲಿ ವೀಕ್ಷಣೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಎಡಮಂಗಲ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಣ್ಣ ಜಾಲ್ತಾರು, ಮುರುಳ್ಯ – ಎಣ್ಮುರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷೆ ಶ್ರೀಮತಿ ಕುಸುಮಾವತಿ ರೈ ಎಣ್ಮುರುಗುತ್ತು, ಶಕ್ತಿಕೇಂದ್ರದ ಪ್ರಮುಖರಾದ ಯೋಗಾನಂದ ಉಳ್ಳೆಳಾಡಿ, ಬೂತ್ ಸಮಿತಿ ಪ್ರಮುಖರಾದ ರಾಜೇಂದ್ರಪ್ರಸಾದ್ ಶೆಟ್ಟಿ ಎಣ್ಮುರುಗುತ್ತು, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಸವಿತಾ ಕಲ್ಲೇರಿ, ಎಣ್ಮುರು ಬಿ.ಜೆ.ಪಿ. ಬೂತ್ ಸಮಿತಿ ಅಧ್ಯಕ್ಷ ಕಾರ್ತಿಕ್ ರೈ ಕಲ್ಲೇರಿ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.