ಕೊಡಗು ಸಂಪಾಜೆ: ಗುಡ್ಡೆಗದ್ದೆಯಲ್ಲಿ ಮರ ಬಿದ್ದು ಮನೆಗೆ ಹಾನಿ

0

ಮನೆಯ ಬಳಿ ಇದ್ದ ದೊಡ್ಡ ಗಾತ್ರದ ಮರವೊಂದು ಮುರಿದು ಮನೆಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾದ ಘಟನೆ ಕೊಡಗು ಸಂಪಾಜೆ ಗ್ರಾಮದ ಗುಡ್ಡೆಗದ್ದೆಯಲ್ಲಿ ನ.5ರಂದು ಸಂಜೆ ಸಂಭವಿಸಿದೆ.

ಸಂಪಾಜೆ ಪರಿಸರದಲ್ಲಿ ಸಂಜೆಯ ವೇಳೆಯಲ್ಲಿ ಸುರಿದ ಭಾರೀ ಮಳೆಗೆ ಗುಡ್ಡೆಗದ್ದೆಯ , ಸಂಪಾಜೆ ಗ್ರಾ.ಪಂ. ಮಾಜಿ ಸದಸ್ಯೆ ಶ್ರೀಮತಿ ಮಾಲತಿ ನಾರಾಯಣ ಅವರ ಮನೆಗೆ ಮನೆ ಸಮೀಪವಿದ್ದ ದೊಡ್ಡ ಗಾತ್ರದ ಮರವೊಂದು ಮುರಿದು ಬಿದ್ದಿದ್ದು, ಮನೆಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಸಂಭವಿಸಿದ್ದು, ಮನೆಯವರು ಅಪಾಯದಿಂದ ಪಾರಾಗಿರುವುದಾಗಿ ತಿಳಿದುಬಂದಿದೆ.


ಮನೆಯ ಹಂಚುಗಳಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು, ಅಡುಗೆ ಕೋಣೆಗೂ ಹಾನಿ ಸಂಭವಿಸಿ, ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿರುವುದಾಗಿ ತಿಳಿದುಬಂದಿದೆ.