ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯ ಸ್ಥಾನದ ಉಪ ಚುನಾವಣೆ ಬಹಿಷ್ಕರಿಸಲು ನಿರ್ಧಾರ
ಸುಬ್ರಹ್ಮಣ್ಯ ಗ್ರಾ.ಪಂ ನ ಐನೆಕಿದು ವಾರ್ಡ್ ನ ತೆರವಾದ ಸದಸ್ಯ ಸ್ಥಾನದ ಉಪ ಚುನಾವಣೆ ನಡೆಯಲಿದ್ದು ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಈಗಾಗಲೇ ಘೋಷಣೆ ಆಗಿರುವ ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯ ಸ್ಥಾನಕ್ಕೆ ನಾಮಪತ್ರ ಹಾಕದೆ ಬಹಿಷ್ಕರಿಸಲು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ.
ಈ ಬಗ್ಗೆ ಐನೆಕಿದು ಸಮುದಾಯ ಸಭಾ ಭವನದಲ್ಲಿ ನ.8 ರಂದು ಸಭೆ ನಡೆಸಲಾಗಿದ್ದು ಕಾಂಗ್ರೆಸ್ ಮತ್ತು ಬಿಜೆಪಿವಯವರಿದ್ದು ಸಭೆ ನಡೆಸಲಾಗಿದ್ದು ಸಭೆಯಲ್ಲಿ ನಾಮಪತ್ರ ಹಾಕದೆ ಚುನಾವಣೆ ಬಹಷ್ಕರಿಸುವ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿದುಬಂದಿದೆ. ಸಭೆಯಲ್ಲಿ ಸೋಮಸುಂದರ ಕೂಜುಗೋಡು, ಗಿರೀಶ್ ಪೈಲಾಜೆ, ನವೀನ್ ಕಟ್ರಮನೆ, ಸತೀಶ್ ಕೂಜುಗೋಡು, ಗುಣವರ್ದನ ಕೆದಿಲ, ಜಯಪ್ರಕಾಶ್ ಕೂಜುಗೋಡು, ಪವನ್ ಸುಬ್ರಹ್ಮಣ್ಯ, ಕಿಶೋರ್ ಕುಮಾರ್ ಕೂಜುಗೋಡು, ಜಗದೀಶ್ ಪಡ್ಪು, ಮದೂಸೂದನ್ ಕಾಪಿಕಾಡು, ಸ್ಥಳೀಯ ಮತ್ತಿತರರು ಉಪಸ್ಥಿತರಿದ್ದರು.