ಗುತ್ತಿಗಾರು ಗ್ರಾಮದ ಮೊಗ್ರ ನಿವಾಸಿ
ಹೊಳೆಕೆರೆ ಚಿನ್ನಪ್ಪ ಗೌಡ ಕೆರೆಮೂಲೆಯವರು ಅಲ್ಪಕಾಲದ ಅಸೌಖ್ಯದಿಂದ ನ. 13ರಂದು ಸಂಜೆ ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 85 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಪಾರ್ವತಿ, ಪುತ್ರ ಕರುಣಾಕರ, ಪುತ್ರಿಯರಾದ ಶ್ರೀಮತಿ ಮೋಹಿನಿ, ಶ್ರೀಮತಿ ರೇವತಿ, ಶ್ರೀಮತಿ ರೇಣುಕಾ, ಶ್ರೀಮತಿ ದುರ್ಗಾವತಿ, ಸೊಸೆ, ಅಡಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.
ನಾಳೆ (ನ.14) ಬೆಳಗ್ಗೆ ಅಂತ್ಯಕ್ರಿಯೆ
ಮೃತರ ಅಂತ್ಯಸಂಸ್ಕಾರ ನಾಳೆ (ನ.14) ಬೆಳಗ್ಗೆ 9 ಗಂಟೆಗೆ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.