ಕಾಂತಮಂಗಲ ಶಾಲಾ ಶೌಚಾಲಯ ನಿರ್ಮಾಣಕ್ಕೆ ಧರ್ಮಸ್ಥಳ ಯೋಜನೆಯಿಂದ ಅನುದಾನ : ಮಂಜೂರಾತಿ ‌ಪತ್ರ ಹಸ್ತಾಂತರ

0

ಅಜ್ಜಾವರ ಗ್ರಾಮದ ಕಾಂತಮಂಗಲ ಶಾಲಾ ಶೌಚಾಲಯ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಗ್ರಾಮಭಿವೃದ್ಧಿ ಯೋಜನೆಡಿಯಿಂದ ರೂ 75000 ಅನುದಾನ ಮಂಜೂರುಗೊಂಡಿದ್ದು, ಬಿಡುಗಡೆ ಪತ್ರವನ್ನು ಹಸ್ತಾಂತರ ಕಾರ್ಯಕ್ರಮ ನ.25ರಂದು ನಡೆಯಿತು.

ಕಾಂತಮಂಗಲ ಶಾಲಾ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಮೀರಾ ಶುಭಹಾರೈಸಿದರು.

ಸ್ಥಳೀಯ ಒಕ್ಕೂಟ ಅಧ್ಯಕ್ಷರಾದ ಸತೀಶ್ ಅತ್ಯಡ್ಕ, ಅಜ್ಜಾವರ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯರಾಮ ಅತ್ಯಡ್ಕ, ಅಜ್ಜಾವರ ಒಕ್ಕೂಟ ಅಧ್ಯಕ್ಷರು ಮಾತನಾಡಿದರು.

ಶಾಲಾ ಮುಖ್ಯಗುರುಗಳಾದ ಸ್ವರ್ಣಲತಾ ಶಾಲಾ‌ ಅವಶ್ಯಕತೆ ಕುರಿತು ಹೇಳಿದರು.

ಅನುದಾನ ಮಂಜೂರಾತಿ ಪತ್ರವನ್ನು ತಾಲೂಕು ಯೋಜನಾಧಿಕಾರಿ ಮಾಧವ ಗೌಡರವರು ವಿತರಿಸಿದರು.

ವಲಯ ಮೇಲ್ವಿಚಾರಕಿ ಕಾಂತಿಕಾಮಣಿ ಕಾರ್ಯಕ್ರಮ ನಿರೂಪಿಸಿದರು.
ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಜಗದೀಶ್ ದೊಡ್ಡೇರಿ, ಪರಮೇಶ್ವರ್ ನಾಯಕ್, ಮಾಧವ ಗೌಡ ಉಪಾಧ್ಯಕ್ಷರು, ಸುಬ್ಬ ಪಟಾಳಿ, ಸರಿತಾ ಬಸವನಪಾದೆ, ಮಾಜಿ ಎಸ್.ಡಿ.ಎಂ.ಸಿ. ಮಂಜುಳಾ ಬಡಿಗೇರ್, ಸೇವಾ ಪ್ರತಿನಿಧಿ ಸೌಮ್ಯ, SDMC ಸದಸ್ಯರು, ಶಿಕ್ಷಕರು, ಪೋಷಕರು ಹಾಗೂ ಒಕ್ಕೂಟ ಸದಸ್ಯರು ಉಪಸ್ಥಿತರಿದ್ದರು. ಶಾಲಾ ಪುಟಾಣಿ ಮಕ್ಕಳು ಧರ್ಮಸ್ಥಳ ಧರ್ಮಾಧಿಕಾರಿಗಳ 77 ನೇ ವರ್ಷದ ಹುಟ್ಟು ಹಬ್ಬಕ್ಕೆ ಶುಭ ಕೋರಿದರು.