ಉಳ್ಳಾಕುಲು ಚಾವಡಿ ಪ್ರತಿಷ್ಠಾ ಕಲಶಕ್ಕೆ ದಿನ ನಿಗದಿ
ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನಕ್ಕೆ ಸಂಬಂಧಿಸಿದ ಶ್ರೀ ಉಳ್ಳಾಕುಲು ಚಾವಡಿ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು ಪ್ರತಿಷ್ಠಾ ಕಲಶವು ಫೆಬ್ರವರಿ ತಿಂಗಳಲ್ಲಿ ನಡೆಯಲಿದ್ದು ಪೂರ್ವ ಭಾವಿಯಾಗಿ ತಾಂಬೂಲ ಪ್ರಶ್ನಾ ಚಿಂತನೆಯು ನ.30 ರಂದು ನಡೆಯಿತು.
ಕುಂಟಾರು ಕ್ಷೇತ್ರದ ಬ್ರಹ್ಮಶ್ರೀ ವೇದಮೂರ್ತಿ ರವೀಶ ತಂತ್ರಿಯವರ ನೇತೃತ್ವದಲ್ಲಿ ಜ್ಯೋತಿಷ್ಯ ಎನ್.ಎಸ್.ಭಟ್ ರವರು ಪ್ರಶ್ನಾ ಚಿಂತನೆ ನಡೆಸಿದರು.
ಶ್ರೀ ಉಳ್ಳಾಕುಲು ಚಾವಡಿ ಪ್ರತಿಷ್ಠಾ ಕಲಶವನ್ನು 2025 ರಲ್ಲಿ 2,3 ರಂದು ನಡೆಸುವುದೆಂದು ನಿಗದಿ ಪಡಿಸಲಾಯಿತು. ದೈವಜ್ಞರ ಚಿಂತನೆಯ ಪ್ರಕಾರ ದೇವಸ್ಥಾನದಲ್ಲಿ 2026 ರಂದು
ಬ್ರಹ್ಮಕಲಶೋತ್ಸವ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು.
ಉಳ್ಳಾಕುಲು ಚಾವಡಿ ಪ್ರತಿಷ್ಠಾ ಕಲಶದ ದಿನದಂದು ನಿತ್ಯ ನೈಮಿತ್ಯಾದಿಗಳ ನಿರ್ಣಯ ಮಾಡುವುದಾಗಿ ತಂತ್ರಿಯವರು ನಿರ್ದೇಶಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರರಾದ ಶ್ರೀಪತಿ ಬೈಪಡಿತ್ತಾಯ, ಜಯಪ್ರಕಾಶ್ ಬೈಪಡಿತ್ತಾಯ, ಅರ್ಚಕ ಹರ್ಷಿತ್ ಬನ್ನಿಂತಾಯ, ಸಮಿತಿ ಗೌರವಾಧ್ಯಕ್ಷ ಕೃಷ್ಣ ಕಾಮತ್ ಅರಂಬೂರು,ಗುಂಡ್ಯ ಮಾಡಾರಮನೆ ಉಳ್ಳಾಕುಲು ದೈವಸ್ಥಾನದ ಅಧ್ಯಕ್ಷ
ಅಶೋಕ ಪ್ರಭು ಸುಳ್ಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ, ಸೇವಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಕೋಲ್ಚಾರು,
ಕೃಪಾಶಂಕರ ತುದಿಯಡ್ಕ, ಪ್ರಸನ್ನ ಕೆ.ಸಿ.ಬಡ್ಡಡ್ಕ, ಜಯಪ್ರಕಾಶ್ ಕುಂಚಡ್ಕ, ಹರಿಪ್ರಸಾದ್ ಕಾಪುಮಲೆ, ಸತೀಶ್ ಕುಂಭಕೋಡು, ಜಗದೀಶ್ ಸರಳಿಕುಂಜ, ಅಚ್ಚುತ ಮಣಿಯಾಣಿ ಆಲೆಟ್ಟಿ, ಹರಿಪ್ರಸಾದ್ ಗಬ್ಬಲ್ಕಜೆ, ನಳಿನಿ ರೈ ಆಲೆಟ್ಟಿ, ಮಮತಾ ನಾರ್ಕೋಡು,
ರಾಮಚಂದ್ರ ಆಲೆಟ್ಟಿ,
ಶ್ರೀಪತಿ ಭಟ್ ಮಜಿಗುಂಡಿ, ಗಣಪತಿ ಭಟ್ ಮಜಿಗುಂಡಿ,
ಸುಧಾಮ ಆಲೆಟ್ಟಿ, ಕೊರಗಪ್ಪ ಮಾಸ್ತರ್ ಕಣಕ್ಕೂರು, ಗೋವಿಂದ ಭಟ್ ಎಲಿಕ್ಕಳ, ಗಗನ್ ಬೈಪಡಿತ್ತಾಯ, ಸುಧಾಕರ ಆಲೆಟ್ಟಿ, ವೆಂಕಪ್ಪ ಗೌಡ ಕುಂಚಡ್ಕ, ಎಸ್.ಎನ್.ಜಯರಾಮ ಪಿಂಡಿಬನ, ತೇಜುಕುಮಾರ್ ಕುಡೆಕಲ್ಲು, ರಾಮಚಂದ್ರ ಬಾಳೆಹಿತ್ಲು, ಪುರುಷೋತ್ತಮ ದೋಣಿಮೂಲೆ, ಭಜನಾ ಸಂಘದ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ, ಕಾರ್ಯದರ್ಶಿ ಪ್ರವೀಣ್ ಆಲೆಟ್ಟಿ, ನವೀನ್ ಕುಮಾರ್ ಆಲೆಟ್ಟಿ, ಲಿಂಗಪ್ಪ ಭಂಡಾರಿ ಮೊರಂಗಲ್ಲು
ದೈವ ನರ್ತಕ
ಬಾಬು ಅಜಿಲ,
ಗುಂಡ್ಯ, ಪರಿವಾರ, ದೇವಸ್ಯ, ಪಂಜಿಮಲೆ ಕುಟುಂಬದ ಹಿರಿಯರು ಹಾಗೂ ಗ್ರಾಮದ ಭಕ್ತಾದಿಗಳು ಭಾಗವಹಿಸಿದರು.