ಮಲೆನಾಡು ಜಂಟಿ ಕ್ರಿಯಾ ಸಮಿತಿ ಮತ್ತು ರೈತ ಹಿತಾ ರಕ್ಷಣಾ ವೇದಿಕೆ ಒತ್ತಾಯ
ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಸೂಕ್ಷ್ಮ ವಲಯದಲ್ಲಿ ಬರುವ ಗ್ರಾಮ ಪಂಚಾಯತ್ ಗಳಲ್ಲಿ ಪಶ್ಚಿಮ ಘಟ್ಟದ ಸಂರಕ್ಷಣೆಯಲ್ಲಿ ಜನರು ಮತ್ತು ಜೀವವೈವಿಧ್ಯ ವಿಧಿಯನ್ನು ಜಾರಿ ಮಾಡಲು ಹಾಗೂ ಜನರ ಕಟ್ಟ ಕಡೆಯ ಸಂಸತ್ತು ಆದ ಗ್ರಾಮ ಸಭೆಯಲ್ಲಿ ಚರ್ಚಿಸಲು ವಿಶೇಷ ಗ್ರಾಮ ಸಭೆ ಮಾಡುವಂತೆ ಮಲೆನಾಡು ಜಂಟಿ ಕ್ರೀಯಾ ಸಮಿತಿ ಮತ್ತು ರೈತ ಹಿತ ರಕ್ಷಣಾ ವೇದಿಕೆ ಕೊಲ್ಲಮೊಗ್ರು-ಕಲ್ಮಕಾರು, ರೈತ ಸಂಘ ಸುಳ್ಯ ಆಗ್ರಹಿಸಿದೆ.
ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಲೆನಾಡು ಜಂಟಿ ಕ್ರಿಯಾ ಸಮಿತಿ ಸಂಚಾಲಕ ಪ್ರದೀಪ್ ಕುಮಾರ್ ಕೆ.ಎಲ್., ಮಲೆನಾಡಿನ ಸಂವಿಧಾನ ಬದ್ಧ ಹಕ್ಕುಗಳಾದ 371ನೇ ವಿಧಿ ಅನ್ವಯ ಸ್ವಾಯತ್ತತೆಯ ಅಡಿಯಲ್ಲಿ ಸಂರಕ್ಷಣೆ ಹಾಗೂ 2006ರ ಅರಣ್ಯ ಹಕ್ಕು ಕಾಯ್ದೆಗಳನ್ನು ಅಳವಡಿಸಲು ಸಂವಿಧಾನ ಬದ್ಧ ಹಕ್ಕುಗಳು ಶೆಡ್ಯೂಲ್ 6ರ ಪ್ರಕಾರ ಗುಡ್ಡಗಾಡು ಕಾನೂನು ಜಾರಿ ಮಾಡಬೇಕು ಎಂದರು.
ಈ ವಿಶೇಷ ಗ್ರಾಮ ಸಭೆಯನ್ನು ಪ್ರತಿಯೊಬ್ಬ ಗ್ರಾಮ ಪಂಚಾಯತ್ ಸದಸ್ಯ ಮುತುವರ್ಜಿ ವಹಿಸಿದ್ದಲ್ಲಿ ಕಳೆದ 25 ವರ್ಷಗಳಿಂದ ಮಲೆನಾಡಿನ ಆಯಾಯ ಭಾಗದಲ್ಲಿ ನಡೆದ ಸೂಕ್ಷ್ಮ ಪ್ರದೇಶ ಎಂದು ಕೆಂಪು ಪ್ರದೇಶದ ರಹದಾರಿ ಎಂಬ ಹಣೆಪಟ್ಟಿ ತೆಗೆದು ಸರಕಾರಕ್ಕೆ ಜನರ ಮತ್ತು ಪರಿಸರದ ಉಳಿವಿಗೆ ಒಂದು ಸಮಗ್ರ ಸ್ವಾಯತ್ತೆಯ 371 ಯೋಜನೆ ಜಾರಿ ಮಾಡಲು ಈ ಮೇಲೆ ಹೇಳಿದ ಸರಕಾರಗಳು ತಂದ ಕಾನೂನು ಪ್ರಕಾರ ಜಾರಿ ಆಗದ ಪಕ್ಷದಲ್ಲಿ ಈ ಎಲ್ಲ ಜನರ ಹೆದರಿಕೆ ಮತ್ತು ಬೆದರಿಕೆ ಹಾಗೂ ಪರಿಸರದ ಅಳಿವು ಉಳಿವಿನ ಪ್ರಶ್ನೆಗೆ ಒಂದು ಸಮಗ್ರ ಚೌಕಟ್ಟು ಬರಲು ಈ ಮೇಲಿನ 3 ಹಕ್ಕನ್ನು ಸಮಸ್ತ ಗೋದಾವರಿಯಿಂದ ಕನ್ಯಾಕುಮಾರಿ ತನಕ ಗ್ರಾಮ ಪಂಚಾಯತ್ ಮುಖೇನ ಸಾಮಾನ್ಯ ಜನರು ಹಕ್ಕೊತ್ತಾಯ ಮಂಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಮಗ್ರ ಯೋಜನೆ ರೂಪಿಸಲು ಅತ್ಯಗತ್ಯವಿರುತ್ತದೆ. ಆದ್ದರಿಂದ ಈ ಕೂಡಲೇ ವಿಶೇಷ ಗ್ರಾಮ ಸಭೆ ಮಾಡಬೇಕು ಎಂದು ಒತ್ತಾಯಿಸುತ್ತೇವೆ ಎಂದರು.
ಅದರಂತೆ ಚಳಿಗಾಲದ ಅಧಿವೇಶನದಲ್ಲಿ ಪ್ರತಿಯೊಬ್ಬ ಮಲೆನಾಡಿನ ಭಾದಿತ ತಾಲೂಕಿನ ವಿಧಾನಸಭಾ ಶಾಸಕರು ಮತ್ತು ಜಿಲ್ಲೆಯ ಸಂಸತ್ತು ಸದಸ್ಯರುಗಳಲ್ಲಿ 2006ರ ಅರಣ್ಯ ಹಕ್ಕು ಕಾಯಿದೆ, 1964ರ ಕಂದಾಯ ಕಾನೂನುಗಳನ್ನು ಜಾರಿಗೊಳಿಸುವ ಬಗ್ಗೆ ಹಾಗೂ ಕಾನೂನು ಬದ್ಧ ಹಕ್ಕು ರಕ್ಷಣೆ ಮಾಡಲು ಕೋರಿಕೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 48 ಗ್ರಾಮ ಪಂಚಾಯಿತಿಗಳಿಗೆ ರಿಜಿಸ್ಟರ್ ಕೋರಿಕೆ ಕೊಟ್ಟಾಗಿದೆ. ಎಲ್ಲ ಬಾದಿತ ಸದಸ್ಯರುಗಳು ವಿಶೇಷ ಗ್ರಾಮ ಸಭೆ ಕರೆದು ಆಯಾಯ ಕಾರ್ಯನಿರ್ವಾಹಕ ಅಧಿಕಾರಿಗಳು ಇಡೀ ಗ್ರಾಮಕ್ಕೆ ಹೋಗಿ ಜನರ ಉಳಿವಿಗೋಸ್ಕರ, ಸಮಗ್ರ ಅರಣ್ಯ ಸಂರಕ್ಷಣೆಗೋಸ್ಕರ
ಕಾನೂನು ನಡಾವಳಿಯನ್ನು ಜನರಿಗೆ ತಿಳಿಸಿ ಕೊಡಬೇಕು ಎಂದರು.
- ಅರಣ್ಯ ಹಕ್ಕು ಕಾಯ್ದೆ ಕಾನೂನು ಪ್ರಕಾರ ಹಕ್ಕು ಪತ್ರಗಳು ಕಾನೂನಿನಲ್ಲಿ ಇರುವಂತೆ ಗುಡ್ಡಗಾಡು ಹಾಗೂ ಇನ್ನಿತರ ಜನರಿಗೆ.
- ಗುಡ್ಡಗಾಡು ಕಾನೂನು ಪ್ರಕಾರ ಸಂವಿಧಾನದ ಶೆಡ್ಯೂಲ್ 6ರ ಪ್ರಕಾರ ಸಂರಕ್ಷಣೆ
- ಎಲ್ಲ ಕಾನೂನಿಗಿಂತ ಮೊದಲು ಸಂವಿಧಾನದ ಪ್ರಕಾರ ಗುಡ್ಡಗಾಡುಗಳಲ್ಲಿ ಬದುಕುವ ಹಕ್ಕುಗಳು ಇರುವುದನ್ನು ಯಾವುದೇ ಸರಕಾರ ಮೀರುವಂತಿಲ್ಲ.
- ಪ್ರತಿ ಭಾದಿತ ಜನರು ಮಾನ್ಯ ವಿಧಾನಸಭಾ ಶಾಸಕರು ಗಳು ಬೆಳಗಾವಿ ಅಧಿವೇಶನದ ಹಾಗೂ ಸಂಸತ್ತಿನ ಸದಸ್ಯರು ಗಳು ಚಳಿಗಾಲದ ಅಧಿವೇಶನ ESA, ES2 ಬಗ್ಗೆ 1981 ರಿಂದ ಆದ ಬಗ್ಗೆ ವಿಮರ್ಶೆ ಹಾಗೂ ಮಂಡನೆ ಮತ್ತು ಯಾವುದೇ ಅವೈಜ್ಞಾನಿಕ ವರದಿಯನ್ನು ತಿರಸ್ಕರಿಸಿ ವಿಧಾನಸಭೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಂದ, ಸ್ಥಳೀಯರು ಹಾಗೂ ವೈಜ್ಞಾನಿಕ ಯಾವುದೇ ಸಹಕಾರ ಇಕೋ ಸೆನ್ಸಿಟಿವ್ ಏರಿಯಾ ಮತ್ತು ಇಕೋ ಸೆನ್ಸಿಟಿವ್ ಝನ್ ನಿಯಮನ್ನು ಪುನರ್ ವಿಮರ್ಶೆಗೊಳಿಸಿ ಅದರ ಕಾನೂನು ಬದ್ಧತೆ ಬಗ್ಗೆ ನಡಾವಳಿ ಎಂದು ಅವರು ತಿಳಿಸಿದರು.
ಪ್ರವೀಣ್ ಮುಂಡೋಡಿ, ಅಶೋಕ್ ಎಡಮಲೆ, ಪ್ರವೀಣ್ ಮುಂಡೋಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.