ಕೆ.ವಿ.ಜಿ. ಆಸ್ಪತ್ರೆಗೆ ದೇಹದಾನ
ಸುಳ್ಯದ ಕಾಯರ್ತೋಡಿ ನಿವಾಸಿ ಡಾ.ಸುಧಾಕರ ಭಟ್ ರವರ ತಾಯಿ ಶ್ರೀಮತಿ ಲಕ್ಷ್ಮಿ ಅಮ್ಮರವರು ಇಂದು ಸಂಜೆ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು. ಅವರ ಪಾರ್ಥಿವ ಶರೀರವನ್ನು ಮೃತರ ಇಚ್ಛೆಯಂತೆ ಕೆ.ವಿ.ಜಿ. ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾನ ಮಾಡಲಾಯಿತೆಂದು ತಿಳಿದುಬಂದಿದೆ.