ಬೆಳ್ಳಾರೆ ಲಯನ್ಸ್ ಕ್ಲಬ್ ಅಧ್ಯಕ್ಷೆ ಲಯನ್ ಉಷಾ ಬಿ. ಭಟ್‌ರವರು ಅಂತರಾಷ್ಟ್ರೀಯ ಲಯನ್ ಸಂಸ್ಥೆಯ ಎಲ್‌ಸಿಐಎಫ್‌ಗೆ ದೇಣಿಗೆ ನೀಡಿದ್ದಾರೆ.
ಡಿ.13ರಂದು ಬೆಂಗಳೂರಿನ ಯಶವಂತಪುರದ ಆರ್‌ಜಿ ರಾಯಲ್ಸ್ ಹೋಟೆಲ್‌ನಲ್ಲಿ ನಡೆದ ಮಲ್ಟಿಪಲ್ ಡಿಸ್ಟ್ರಿಕ್ಟ್ 317 ನಿಂದ ನಡೆದ ಲಯನ್ಸ್‌ನ ಅಂತರಾಷ್ಟ್ರೀಯ ಅಧ್ಯಕ್ಷ ಲ. ಫ್ಯಾಬ್ರಿಕೋ ಒಲಿವಿರ ಮತ್ತು ಅವರ ಪತ್ನಿ ಅಮರಿಲ್ಸ್‌ರವರಿಗೆ ಗೌರವ ಕಾರ್ಯಕ್ರಮದಲ್ಲಿ ಒಂದು ಸಾವಿರ ಡಾಲರ್ (ರೂ. 83,475/- ) ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ಲ. ಭಾರತಿ ಬಿ.ಎಂ., ಪಿಎಂಜೆಎಫ್, ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಲ. ಗೀತಾ ರಾವ್ ಪಿಎಂಜೆಎಫ್, ಎಲ್‌ಸಿಐಎಫ್ ಚೀಫ್ ಕೋ ಆರ್ಡಿನೇಟರ್ ಲ. ಚಂದ್ರಹಾಸ ರೈ ಪಿಎಂಜೆಎಫ್ ಮೊದಲಾದವರು ಉಪಸ್ಥಿತರಿದ್ದರು.