ಭಾಗವಹಿಸುವವರು ಡಿ.17 ರ ಮಧ್ಯಾಹ್ನ 2.00 ಗಂಟೆಯೊಳಗೆ ನೋಂದಣಿಗೆ ಅವಕಾಶ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವತಿಯಿಂದ ನಡೆಸಲ್ಪಡುವ ಕುಮಾರ ಯಾತ್ರೆ ಡಿ.21 ರಂದು ನಡೆಯಲಿರುವುದಾಗಿ ತಿಳಿದು ಬಂದಿದೆ.
ಶ್ರೀ ದೇವಳದ ಸಂಪ್ರದಾಯ ಪ್ರಕಾರ ಈ ಹಿಂದಿನಿಂದ ಆಚರಿಸಿಕೊಂಡು ಬಂದಿರುವಂತೆ ಕುಮಾರಪರ್ವತದಲ್ಲಿ ಕುಕ್ಕೆ ಶ್ರೀ ದೇವಸ್ಥಾನ ವತಿಯಿಂದ ನೆರವೇರಲಿರುವ ಪೂಜೆಯನ್ನು ಶ್ರೀ ದೇವಳದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ಡಿ. 21 ರ ಶನಿವಾರ ಮಧ್ಯಾಹ್ನ ಸುಮಾರು 12.00 ಗಂಟೆಗೆ ನೆರವೇರಿಸಲಾಗುವುದು. ಸ್ವ- ಇಚ್ಚೆಯಿಂದ ಕುಮಾರಪರ್ವತಕ್ಕೆ ತೆರಳಿ ಪೂಜೆಯಲ್ಲಿ ಭಾಗವಹಿಸಲು ಇಚ್ಛಿಸುವ ಭಕ್ತಾದಿಗಳು 21-12-2024 ರಂದು ಮಧ್ಯಾಹ್ನ ಗಂಟೆ 12.00 ರ ಒಳಗಾಗಿ ಪೂಜಾ ಸ್ಥಳದಲ್ಲಿದ್ದು, ಪೂಜೆಯಲ್ಲಿ ಭಾಗವಹಿಸಿ ಬಹುದಾಗಿದೆ ಶ್ರೀ ದೇವಳದ ಸಹಕಾರದೊಂದಿಗೆ ಪೂಜೆಯಲ್ಲಿ ಭಾಗವಹಿಸಲು ಯಾತ್ರೆ ಮಾಡುವ ಭಕ್ತಾದಿಗಳು ವೈಯಕ್ತಿಕವಾಗಿ ಅಥವಾ ತಂಡಗಳ ಹೆಸರನ್ನು ಶ್ರೀ ದೇವಳದ ಆಡಳಿತ ಕಛೇರಿಯ ಮಾಹಿತಿ ವಿಭಾಗದಲ್ಲಿ ದಿನಾಂಕ 17-12-2024 ರ ಅಪರಾಹ್ನ ಗಂಟೆ 2.00 ರ ಒಳಗಾಗಿ ನೊಂದಾಯಿಸಿಕೊಳ್ಳುವಂತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.