ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆ

0

ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆ ಡಿ.23ರಂದು ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಡಿ.17ರಂದು ಒಟ್ಟು ಐದು ಮಂದಿ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದು, ಸಹಕಾರಿಗಳ ಅಭಿವೃದ್ಧಿ ರಂಗದಿಂದ 12 ಮಂದಿ, ಸಮಾನ ಮನಸ್ಕರ ಸಮನ್ವಯ ಸಹಕಾರಿ ಬಳಗದಿಂದ 12 ಮಂದಿ ಹಾಗೂ ಮೂರು ಮಂದಿ ಸ್ವತಂತ್ರ ಅಭ್ಯರ್ಥಿಗಳು ಸೇರಿ 27 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.

ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಸಹಕಾರಿಗಳ ಅಭಿವೃದ್ಧಿ ರಂಗದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಎ.ಕೆ. ಹನೀಫ್ ಹಾಗೂ ಚಿದಾನಂದ ಯು.ಎಸ್. ತಮ್ಮ ನಾಮಪತ್ರಗಳನ್ನು ಹಿಂಪಡೆದಿದ್ದಾರೆ‌.

ಸಮಾನ ಮನಸ್ಕರ ಸಮನ್ವಯ ಸಹಕಾರಿ ಬಳಗದಿಂದ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜಗದೀಶ್ ಕೆ.ಪಿ., ನಾಗೇಶ್ ಬಾಚಿಗದ್ದೆ, ಹಾಗೂ ಸಾಮಾನ್ಯ ಮಹಿಳಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ಶ್ರೀಮತಿ ರಜನಿ ಶರತ್ ಅವರು ನಾಮಪತ್ರಗಳನ್ನು ಹಿಂಪಡೆದಿದ್ದಾರೆ‌.

ಇದೀಗ ಸಹಕಾರಿಗಳ ಅಭಿವೃದ್ಧಿ ರಂಗದಿಂದ 12, ಸಮಾನ ಮನಸ್ಕರ ಸಮನ್ವಯ ಸಹಕಾರಿ ಬಳಗದಿಂದ 12 ಹಾಗೂ ಸ್ವತಂತ್ರ ಅಭ್ಯರ್ಥಿಗಳಾಗಿ ಮೂರು ಮಂದಿ ಸೇರಿದಂತೆ ಒಟ್ಟು 27 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದು, ಅಭ್ಯರ್ಥಿಗಳಿಗೆ ಚಿಹ್ನೆಗಳ ಹಂಚಿಕೆ ಕಾರ್ಯ ನಡೆಯುತ್ತಿದೆ.